Publish Date: Tue, 07 Mar 2023 (08:20 IST)
Updated Date: Tue, 07 Mar 2023 (08:48 IST)
ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಎದುರಾಳಿಗಳ ಮುಂದೆ ಹೀನಾಯ ಸೋಲು ಕಂಡಿದೆ.
ಎರಡನೇ ಪಂದ್ಯದಲ್ಲಿ ಆರ್ ಸಿಬಿ ಪ್ರಬಲ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ ಗಳ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿ 155 ರನ್ ಗಳಿಗೆ ಆರ್ ಸಿಬಿ ಆಲೌಟ್ ಆಗಿತ್ತು. ಈ ಮೊತ್ತವನ್ನು ಮುಂಬೈ ಲೀಲಾಜಾಲವಾಗಿ ಬೆನ್ನಟ್ಟಿ ಕೇವಲ 14.2 ಓವರ್ ಗಳಲ್ಲೇ 1 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗುರಿ ತಲುಪಿತು.
ವಿಂಡೀಸ್ ಮೂಲದ ತಾರೆ ಹೇಲಿ ಮ್ಯಾಥ್ಯೂಸ್ ಮತ್ತೆ ಅಬ್ಬರಿಸಿದ್ದು ಕೇವಲ 38 ಎಸೆತಗಳಿಂದ ಅಜೇಯ 77 ರನ್ ಚಚ್ಚಿದರು. ಮತ್ತೊಬ್ಬ ಓಪನರ್ ಯಶಿಕಾ ಭಾಟಿಯಾ 23 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಸೀವರ್ ಬ್ರಂಟ್ 29 ಎಸೆತಗಳಿಂದ ಅಜೇಯ 55 ರನ್ ಗಳಿಸಿದರು.
ಬ್ಯಾಟಿಂಗ್ ನಲ್ಲಿ ಕಳೆಗುಂದಿದ್ದ ಆರ್ ಸಿಬಿ ಬೌಲಿಂಗ್ ನಲ್ಲೂ ಪರಿಣಾಮ ಬೀರಲೇ ಇಲ್ಲ. ರೇಣುಕಾ ಸಿಂಗ್, ಎಲ್ಸೆ ಪೆರಿ, ಮೇಘನಾ ಶಟ್ ಮುಂತಾದ ಪ್ರಮುಖ ಬೌಲರ್ ಗಳಿದ್ದರೂ ಆರ್ ಸಿಬಿ ಎದುರಾಳಿಗಳ ಮೇಲೆ ಕೊಂಚವೂ ನಿಯಂತ್ರಣ ಹೇರಲು ಸಾಧ‍್ಯವೇ ಆಗುತ್ತಿಲ್ಲ. ಜೊತೆಗೆ ಫೀಲ್ಡಿಂಗ್ ಪ್ಲೇಸ್ ಮೆಂಟ್ ಕೂಡಾ ಕಳಪೆಯಾಗಿತ್ತು. ಪ್ರಮುಖ ಆಟಗಾರರೆಲ್ಲರೂ ಆರ್ ಸಿಬಿಯಲ್ಲಿದ್ದರೂ ಇನ್ನೂ ಒಂದು ತಂಡವಾಗಿ ಆಡುತ್ತಿಲ್ಲ. ಹೀಗಾಗಿಯೇ ತಂಡ ಸೋಲು ಕಾಣುತ್ತಿದೆ.