ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಮತ್ತೆ ಕಳೆಗುಂದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಆರ್ ಸಿಬಿ 18.4 ಓವರ್ ಗಳಲ್ಲಿ 155 ರನ್ ಗಳಿಗೆ ಆಲೌಟ್ ಆಗಿದೆ. ನಾಯಕಿ ಸ್ಮೃತಿ ಮಂಧನಾ 17 ಎಸೆತಗಳಿಂದ 23 ರನ್ ಗಳಿಸಿದರು. ಆದರೆ ಸೋಫೀ ಡಿವೈನ್ ಮತ್ತೆ ವಿಫಲರಾದರು. ಅವರ ಕೊಡುಗೆ 16 ರನ್. ದಿಶಾ ಕಸತ್ ಶೂನ್ಯ, ಎಲ್ಸೆ ಪೆರ್ರಿ 13 ರನ್ ಗೆ ರನೌಟ್ ಆದರು. ನಿರೀಕ್ಷೆ ಮೂಡಿಸಿದ್ದ ಹೀದರ್ ನೈಟ್ ಶೂನ್ಯಕ್ಕೆ ಔಟಾಗಿದ್ದು ಆರ್ ಸಿಬಿಗೆ ಹೊಡೆತ ನೀಡಿತು.
ರಿಚಾ ಘೋಷ್ ಎಚ್ಚರಿಕೆಯ ಆಟವಾಡಿ 28 ರನ್ ಗಳಿಸಿದರು. ಕನಿಕಾ ಅಹುಜಾ ಬಿರುಸಿನ 22 ರನ್, ಶ್ರೇಯಾಂಕ ಪಾಟೀಲ್ 23 ರನ್ ಗಳಿಸಿದರು. ಆದರೆ ಯಾರೂ ಸಿಕ್ಕ ಆರಂಭವನ್ನು ದೊಡ್ಡ ಮೊತ್ತ ಅಥವಾ ಜೊತೆಯಾಟವಾಗಿ ಪರಿವರ್ತಿಸಲು ವಿಫಲವಾಗಿದ್ದು ಆರ್ ಸಿಬಿ ದೊಡ್ಡ ಮೊತ್ತದ ಕನಸಿಗೆ ಹೊಡೆತ ನೀಡಿತು. ಮತ್ತೊಮ್ಮೆ ಹರ್ಮನ್ ಬಳಗ ಬೌಲಿಂಗ್ ನಲ್ಲಿ ತನ್ನ ಆಳ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿತು. ಇದೀಗ ಮುಂಬೈ ಗೆಲುವಿಗೆ 156 ರನ್ ಗಳಿಸಬೇಕಿದೆ.