Select Your Language

Notifications

webdunia
webdunia
webdunia
webdunia

ಜೈಂಟ್ಸ್‌ ಹಣಿಯಲು ತವರಿನಲ್ಲಿ ಸಜ್ಜಾದ ಆರ್‌ಸಿಬಿ: ಮುಯ್ಯಿ ತೀರಿಸಿಕೊಳ್ಳುತ್ತಾ ಗುಜರಾತ್‌ ಪಡೆ

WPL 2025, RCB vs Gujarat Gaints Live Match, Smriti Mandhana

Sampriya

ಬೆಂಗಳೂರು , ಗುರುವಾರ, 27 ಫೆಬ್ರವರಿ 2025 (19:21 IST)
Photo Courtesy X
ಬೆಂಗಳೂರು: WPLನ 12 ನೇ ಪಂದ್ಯದಲ್ಲಿ ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಗುಜರಾತ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದೆ. ಕೊನೆಯ ಬಾರಿ ಈ ಎರಡು ತಂಡಗಳು WPL ಮೊದಲ ಪಂದ್ಯಾದಲ್ಲಿ ಮುಖಾಮುಖಿಯಾಗಿ, ಆರ್‌ಸಿಬಿ ವನಿತೆಯರು ಗುಜರಾತ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿಕೊಂಡಿತ್ತು.

ಇದೀಗ ಮತ್ತೇ ಈ ಬಲಿಷ್ಠ ತಂಡಗಳು ಎದುರು ಬದುರಾಗಲಿದೆ.  ಎರಡು ಗೆಲುವು ಮತ್ತು ಎರಡು ಸೋಲುಗಳೊಂದಿಗೆ, ಹಾಲಿ ಚಾಂಪಿಯನ್ನರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಟಾಸ್‌ ಗೆದ್ದ ಗುಜರಾತ್ ಜೈಂಟ್‌ ಬ್ಯಾಟಿಂಗ್ ಆಯ್ದು, ಆರ್‌ಸಿಬಿಯನ್ನು ಫೀಲ್ಡಿಂಗ್‌ ಸ್ವಾಗತಿಸಿದೆ.

ಆರ್‌ಸಿಬಿ ತಂಡವು ಅದ್ಭುತ ಆರಂಭವನ್ನು ಹೊಂದಿದ್ದರೂ, ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಗೆದ್ದಿದ್ದರೂ, ಅವರು ಕ್ರಮವಾಗಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಜ್ ವಿರುದ್ಧದ ಅವರ ಹಿಂದಿನ ಎರಡು ಪಂದ್ಯಗಳಲ್ಲಿ ನಿರಾಶಾದಾಯಕ ಸೋಲನ್ನು ಅನುಭವಿಸಿದ್ದಾರೆ. ಬೆಂಗಳೂರು ತಂಡವು ಅವರ ಕೊನೆಯ ಎರಡು ಪಂದ್ಯಗಳು ಅವರು ತವರು ನೆಲದಲ್ಲಿ ನಡೆಯುತ್ತಿದ್ದು, ಈ ಭಾರೀಯಾದರು ಗೆಲುವಿನ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಾರಾ ಕಾದು ನೋಡಬೇಕಿದೆ.

ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ನಾಲ್ಕು ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಮತ್ತು ಕೊನೆಯ ಸ್ಥಾನದಲ್ಲಿದೆ. ಆಶ್ಲೀಗ್ ಗಾರ್ಡ್ನರ್ ನೇತೃತ್ವದ ತಂಡದ ಅಭಿಯಾನವು ಭಯಾನಕವಾಗಿದೆ, ಇಂದು ಆರ್‌ಸಿಬಿ ತಂಡದ ವಿರುದ್ಧ ಗೆಲುವಿನೊಂದಿಗೆ ಸುಧಾರಿಸುವ ಗುರಿಯನ್ನು ಹೊಂದಿದ್ದಾರೆ. ಅವರ ಏಕೈಕ ಗೆಲುವು ಯುಪಿ ಮೂಲದ ತಂಡದ ವಿರುದ್ಧವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಅರ್ಜುನ ಪ್ರಶಸ್ತಿ ಪುರಸ್ಕೃತೆ ಬಾಕ್ಸರ್ ಸ್ವೀಟಿ ಬೋರಾ