ಹರಿಯಾಣ: ಮಾಜಿ ವಿಶ್ವ ಚಾಂಪಿಯನ್, ಬಾಕ್ಸರ್ ಸ್ವೀಟಿ ಬೋರಾ ಅವರು ತಮ್ಮ ಪತಿ, ಕಬ್ಬಡಿ ಆಟಗಾರ ದೀಪಕ್ ಹೂಡಾ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ.
ಅರ್ಜುನ ಪ್ರಶಸ್ತಿ ಪುರಸ್ಕೃತೆ ಹಾಗೂ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೋರಾ ಅವರು ತಮ್ಮ ಏಷ್ಯಾಡ್ ಕಂಚು ವಿಜೇತ, ಕಬಡ್ಡಿ ಆಟಗಾರ ಪತಿ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಆರೋಪ ಮಾಡಿದ್ದಾರೆ. ಎಫ್‌ಐಆರ್‌ನಲ್ಲಿ ವರದಕ್ಷಿಣೆಗಾಗಿ ತನ್ನ ಮೇಲೆ ದೀಪಕ್ ಹಲ್ಲೆ ಮಾಡಿದ್ದಾನೆ ಎಂದು ದೂರಿದ್ದಾರೆ.
ಇವರು 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೋರಾ ಅವರು ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಹೂಡಾ ವಿರುದ್ಧ ಹರಿಯಾಣದ ಹಿಸಾರ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಪತಿ ದೀಪಕ್ ಹೂಡಾ ವಿರುದ್ಧ ಸ್ವೀಟಿ ಬೋರಾ ನೀಡಿದ ದೂರಿನ ಆಧಾರದ ಮೇಲೆ ಫೆಬ್ರವರಿ 25 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿಸಾರ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ಗುರುವಾರ ತಿಳಿಸಿದ್ದಾರೆ.
ಹೂಡಾ ಅವರ ಪರವಾಗಿ ಹಾಜರುಪಡಿಸಲು ಕೇಳಲಾಗಿದೆಯೇ ಎಂದು ಕೇಳಿದಾಗ, "ನಾವು ಅವರಿಗೆ 2-3 ಬಾರಿ ನೋಟಿಸ್ ನೀಡಿದ್ದೇವೆ, ಆದರೆ ಅವರು ಹಾಜರಾಗಲಿಲ್ಲ" ಎಂದು ಎಸ್‌ಎಚ್‌ಒ ಹೇಳಿದರು.
ವರದಕ್ಷಿಣೆಗಾಗಿ ದೀಪಕ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮಾಧ್ಯಮವೊಂದಕ್ಕೆ ಸ್ವೀಟಿ ಮಾಹಿತಿ ನೀಡಿದ್ದಾರೆ.