ಬೆಂಗಳೂರು: ಡಬ್ಲ್ಯುಪಿಎಲ್ ಕೂಟದಲ್ಲಿ ಸತತ ಎರಡು ಸೋಲುಗಳ ಬಳಿಕ ಆಘಾತಗೊಂಡಿರುವ ಆರ್ ಸಿಬಿ ಮತ್ತೆ ಗೆಲುವಿನ ಹಳಿಗೆ ಮರಳಬೇಕಾದರೆ ಈ ಒಂದು ತಪ್ಪು ಸರಿಪಡಿಸಲೇಬೇಕು.
ವಡೋದರಾದಲ್ಲಿ ನಡೆದ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಆರ್ ಸಿಬಿ ತವರು ಬೆಂಗಳೂರಿಗೆ ಬರುತ್ತಿದ್ದಂತೇ ಎಡವುತ್ತಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಆರ್ ಸಿಬಿ ಡೆತ್ ಓವರ್ ಬೌಲಿಂಗ್ ನಿಂದಲೇ ಸೋಲು ಅನುಭವಿಸುವಂತಾಯಿತು. ಈ ಒಂದು ತಪ್ಪು ಸರಿಪಡಿಸದೇ ಇದ್ದರೆ ಇಂದು ಗುಜರಾತ್ ಜೈಂಟ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆಲ್ಲಲು ಕಷ್ಟ.
ಗುಜರಾತ್ ಜೈಂಟ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದಿದ್ದ ಆರ್ ಸಿಬಿ ಈಗ ಮತ್ತೆ ಅದೇ ತಂಡವನ್ನು ಸೋಲಿಸಿ ಗೆಲುವಿನ ಹಳಿಗೆ ಮರಳಲು ಹವಣಿಸುತ್ತಿದೆ. ಎಲ್ಲಿಸ್ ಪೆರ್ರಿ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದರೂ ಸ್ಮೃತಿ ಮಂಧನಾ, ರಿಚಾ ಘೋಷ್ ರಿಂದ ಕಳೆದ ಎರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ರನ್ ಬಂದಿಲ್ಲ ಇಂದು ತಂಡಕ್ಕೆ ಮುಳುವಾಗಿದೆ. ಈ ಎರಡು ತಪ್ಪುಗಳನ್ನು ಸರಿಪಡಿಸಿಕೊಂಡು ಇಂದು ತವರಿನಲ್ಲಿ ಗೆಲುವು ಕಾಣಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.