ಬೆಂಗಳೂರು: ಡಬ್ಲ್ಯುಪಿಎಲ್ 2025 ರ ನಿನ್ನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೂಪರ್ ಓವರ್ ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಮೇಲೆ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ. ನಿಮಗೆ ಎಲ್ಲಿಸ್ ಪೆರ್ರಿ ಕಂಡ್ರೆ ಹೊಟ್ಟೆ ಉರಿನಾ ಎಂದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ180 ರನ್ ಗಳ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಕೂಡಾ 180 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು. ಬಳಿಕ ಸೂಪರ್ ಓವರ್ ನಲ್ಲಿ ಯುಪಿ ಗಳಿಸಿದ್ದು ಕೇವಲ 8 ರನ್. ಇದನ್ನು ಗಳಿಸಲೂ ಆಗದೇ ಆರ್ ಸಿಬಿ ಒದ್ದಾಡಿತು.
ಇದಕ್ಕೆ ಕಾರಣ ಸ್ಮೃತಿ ಮಂಧನಾ ಸ್ವಾರ್ಥ ಎನ್ನುವುದು ಅಭಿಮಾನಿಗಳ ಆಕ್ರೋಶವಾಗಿದೆ. ತಾವು ಅಂತಹ ಫಾರ್ಮ್ ನಲ್ಲಿಲ್ಲದೇ ಇದ್ದರೂ ಎಲ್ಲಿಸ್ ಪೆರ್ರಿಯನ್ನು ಬ್ಯಾಟಿಂಗ್ ಗೆ ಕಳುಹಿಸದೇ ತಾವೇ ಬ್ಯಾಟಿಂಗ್ ಗೆ ಬಂದು ದೊಡ್ಡ ತಪ್ಪು ಮಾಡಿದರು ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಿಸ್ ಪೆರ್ರಿಯನ್ನು ಕಂಡರೆ ನಿಮಗೆ ಹೊಟ್ಟೆ ಉರಿನಾ? ಎಲ್ಲಿಸ್ ಪಂದ್ಯ ಗೆಲ್ಲಿಸಿಕೊಟ್ಟರೆ ಎಲ್ಲಿ ನಿಮ್ಮ ಬೆಲೆ ಕಡಿಮೆಯಾಗುತ್ತದೋ ಎಂಬ ಇನ್ ಸೆಕ್ಯುರಿಟಿ ಎಂದು ಫ್ಯಾನ್ಸ್ ಜರೆದಿದ್ದಾರೆ. ಜಸ್ಟ್ 8 ರನ್ ಗಳಿಸಲೂ ಆಗಲಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸೋಲಿನ ಬಳಿಕ ಕಟ್ಟಾ ಅಭಿಮಾನಿಯೊಬ್ಬರು ಕೈ ತೋರಿಸಿ ಸ್ಮೃತಿ ಮೇಲೆ ಆಕ್ರೋಶ ಹೊರಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.