ಬೆಂಗಳೂರು: ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವೆ ನಿನ್ನೆಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಡಬ್ಲ್ಯುಪಿಎಲ್ ಕೂಟದ ಲೀಗ್ ಪಂದ್ಯ ಹೊಸ ದಾಖಲೆಯೊಂದನ್ನು ಮಾಡಿದ್ದು ಆರ್ ಸಿಬಿ ಎಂದರೆ ಸುಮ್ನೇನಾ ಎನ್ನುವಂತೆ ಮಾಡಿದೆ.
ನಿನ್ನೆಯ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರು ಭರ್ತಿಯಾಗಿದ್ದರು. ಮೊನ್ನೆಯೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದವು. ಬಹುಶಃ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪುರುಷರ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಇಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಇರಲ್ಲ. ಇದು ಆರ್ ಸಿಬಿ ಅಭಿಮಾನಿಗಳ ತಾಕತ್ತು.
ನಿನ್ನೆಯ ಪಂದ್ಯದಲ್ಲಿ ಮೈದಾನದಲ್ಲಷ್ಟೇ ದಾಖಲೆಯ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿದ್ದಲ್ಲ. ಟಿವಿ ಮೂಲಕವೂ ವಿಕ್ಷಕರ ಸಂಖ್ಯೆಯಿಂದ ದಾಖಲೆ ಮಾಡಿದೆ. ನಿನ್ನೆಯ ಪಂದ್ಯವನ್ನು 3 ಕೋಟಿಗೂ ಅಧಿಕ ಮಂದಿ ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಮಹಿಳೆಯ ಪಂದ್ಯವೊಂದಕ್ಕೆ ಈ ಮಟ್ಟಿಗೆ ಜನ ವೀಕ್ಷಣೆ ಮಾಡಿದ್ದು ದಾಖಲೆಯಾಗಿದೆ.
ಕಳೆದ ಸೀಸನ್ ಗೆ ಹೋಲಿಸಿದರೆ ಜಿಯೋ ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಣೆ ಮಾಡಿದ ಜನರ ಸಂಖ್ಯೆ 150% ಹೆಚ್ಚಳ ಮತ್ತು ಸ್ಟಾರ್ ಸ್ಪೋರ್ಟ್ ನಲ್ಲಿ 70% ಹೆಚ್ಚು ಜನ ವೀಕ್ಷಣೆ ಮಾಡಿದಂತಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ. ಮಹಿಳೆಯರ ಕ್ರಿಕೆಟ್ ನ್ನು ಇಷ್ಟು ಮಂದಿ ವೀಕ್ಷಣೆ ಮಾಡಿರುವುದು ನಿಜಕ್ಕೂ ದಾಖಲೆಯಾಗಿದೆ.