Select Your Language

Notifications

webdunia
webdunia
webdunia
webdunia

ಬೌಂಡರಿ ಗಳಿಸಿದ್ದಕ್ಕೆ ಶತಕ ಸಿಡಿಸಿದವರಂತೆ ಬ್ಯಾಟ್ ಮೇಲೆತ್ತಿದ್ದೇಕೆಂದು ಬಹಿರಂಗಗೊಳಿಸಿದ ಯಜುವೇಂದ್ರ ಚಾಹಲ್

ಬೌಂಡರಿ ಗಳಿಸಿದ್ದಕ್ಕೆ ಶತಕ ಸಿಡಿಸಿದವರಂತೆ ಬ್ಯಾಟ್ ಮೇಲೆತ್ತಿದ್ದೇಕೆಂದು ಬಹಿರಂಗಗೊಳಿಸಿದ ಯಜುವೇಂದ್ರ ಚಾಹಲ್
ಲಂಡನ್ , ಮಂಗಳವಾರ, 24 ಜುಲೈ 2018 (09:17 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟ್ ಮಾಡಲಿಳಿದಿದ್ದ ಯಜುವೇಂದ್ರ ಚಾಹಲ್ ಅರ್ಧಶತಕ, ಶತಕ ಸಿಡಿದೆಯೂ ಬೌಂಡರಿ ಗಳಿಸಿ ಬ್ಯಾಟ್ ಮೇಲೆತ್ತಿದ್ದೇಕೆ ಎಂದು ಬಹಿರಂಗಪಡಿಸಿದ್ದಾರೆ.
 

ಆವತ್ತು ನಾನು ಮೊದಲನೆಯ ಬಾರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಪಡೆದಿದ್ದೆ. ನಾನು ಬ್ಯಾಟಿಂಗ್ ಗೆ ಹೋಗುತ್ತಿದ್ದೇನೆ ಎಂದಾಗ ಸಹ ಕ್ರಿಕೆಟಿಗರೆಲ್ಲಾ ನನ್ನ ತಮಾಷೆ ಮಾಡಲು ಶುರು ಮಾಡಿದರು. ನನ್ನ ಕೈಲಿ ಕಷ್ಟ ಎಂದು ಕಾಲೆಳಯುತ್ತಿದ್ದರು. ಒಂದು ಎದೆ ಕವಚ ಹಾಕಿಕೋ, ಕನ್ನಡಕ ಹಾಕು ಎಂದೆಲ್ಲಾ ಕಿಚಾಯಿಸಿದರು.

ಅಂತೂ ನಾನು ಬ್ಯಾಟಿಂಗ್ ಗೆ ಇಳಿದು ಒಂದು ಬೌಂಡರಿ ಗಳಿಸಿದಾಗ ಖುಷಿಯಾಯಿತು. ಅದಕ್ಕೇ ಅಂದು ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದೆ. ಪೆವಿಲಿಯನ್ ಗೆ ಬಂದಾಗ ಸಹ ಆಟಗಾರರೆಲ್ಲಾ ನನ್ನನ್ನು ನೋಡಿ ನಗುತ್ತಿದ್ದರು ಎಂದು ಚಾಹಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ನಿರ್ಲಕ್ಷ್ಯಕ್ಕೆ ಕೊನೆಯಾಯಿತೇ ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಭವಿಷ್ಯ?!