Publish Date: Mon, 23 Jul 2018 (09:17 IST)
Updated Date: Mon, 23 Jul 2018 (10:03 IST)
ಲಂಡನ್: ತಮ್ಮದೇ ಗರಡಿಯಲ್ಲಿ ಪಳಗಿದ ಯುವ ಬ್ಯಾಟ್ಸ್ ಮನ್ ರಿಷಬ್ ಪಂತ್ ಇದೀಗ ಟೀಂ ಇಂಡಿಯಾಗೆ ಆಯ್ಕೆಯಾಗಿರುವುದಕ್ಕೆ ಗುರು ರಾಹುಲ್ ದ್ರಾವಿಡ್ ಸಂತಸ ವ್ಯಕ್ತಪಡಿಸಿದ್ದಾರೆ.
ರಿಷಬ್ ಟೆಸ್ಟ್ ಕ್ರಿಕೆಟ್ ನಲ್ಲಿ ಏನು ಮಾಡಲು ಸಾಧ್ಯ ಎಂದು ಅನುಮಾನ ಪಡುತ್ತಿರುವವರಿಗೆ ದ್ರಾವಿಡ್ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಆತನಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯ, ತಾಳ್ಮೆ ಎರಡೂ ಇದೆ ಎಂದು ದ್ರಾವಿಡ್ ಹೇಳಿದ್ದಾರೆ.
ಭಾರತ ಎ ತಂಡ ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ರಿಷಬ್ ಚೆನ್ನಾಗಿಯೇ ಆಡಿದ್ದರು. ದೇಶೀಯ ಕ್ರಿಕೆಟ್, ಐಪಿಎಲ್ ನಲ್ಲೂ ಅವರ ಪ್ರದರ್ಶನ ಆಶಾದಾಯಕವಾಗಿದೆ. ಹಾಗಾಗಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಕ್ಕರೆ ಆತ ಚೆನ್ನಾಗಿ ಆಡಬಹುದು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.