Publish Date: Sun, 22 Jul 2018 (09:33 IST)
Updated Date: Sun, 22 Jul 2018 (09:35 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗದ ಹಿನ್ನಲೆಯಲ್ಲಿ ಭಾರತಕ್ಕೆ ವಾಪಸಾಗಿರುವ ರೋಹಿತ್ ಶರ್ಮಾಗೆ ಕಾಮೆಂಟ್ ಮಾಡಿ ಯಜುವೇಂದ್ರ ಚಾಹಲ್ ರೋಹಿತ್ ಪತ್ನಿ ಕೈಲಿ ಟಾಂಗ್ ಹೊಡೆಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಗೇಟ್ ಗೆ ಒರಗಿಕೊಂಡಿರುವ ಫೋಟೋ ಒಂದನ್ನು ಪ್ರಕಟಿಸಿದ್ದರು. ಇದನ್ನು ನೋಡಿ ಸದ್ಯಕ್ಕೆ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿಗಾಗಿ ಉಳಿದುಕೊಂಡಿರುವ ಚಾಹಲ್ ‘ಮಿಸ್ ಯೂ ರೋಹಿತ್ ಶರ್ಮಾ....’ ಎಂದು ಕಾಮೆಂಟ್ ಮಾಡಿದರು.
ತಕ್ಷಣ ಚಾಹಲ್ ಗೆ ಉತ್ತರ ಕೊಟ್ಟಿರುವ ರೋಹಿತ್ ಪತ್ನಿ ರಿತಿಕಾ ‘ಈಗ ಅವರು ನನ್ನವರು’ ಎಂದು ಟಾಂಗ್ ಕೊಟ್ಟಿದ್ದಾರೆ. ಆ ಮೂಲಕ ತನ್ನ ಪತಿಯನ್ನು ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ ಚಾಹಲ್ ಗೆ ತಮಾಷೆಯಾಗಿ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.