Select Your Language

Notifications

webdunia
webdunia
webdunia
webdunia

ಶತಕ, ಅರ್ಧಶತಕ ಹೊಡೆಯದೆಯೂ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದ ಯಜುವೇಂದ್ರ ಚಾಹಲ್!

ಶತಕ, ಅರ್ಧಶತಕ ಹೊಡೆಯದೆಯೂ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದ ಯಜುವೇಂದ್ರ ಚಾಹಲ್!
ಲಾರ್ಡ್ಸ್ , ಸೋಮವಾರ, 16 ಜುಲೈ 2018 (09:17 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಎಲ್ಲಾ ಬ್ಯಾಟ್ಸ್ ಮನ್ ಗಳೂ ಕಣಕ್ಕಿಳದಿದ್ದರು. ಆದರೆ ಯಜುವೇಂದ್ರ ಚಾಹಲ್ ಸೋಲಿನ ಸುಳಿಯಲ್ಲೂ ಸಂಭ್ರಮಿಸಿದ್ದು ವಿಶೇಷವಾಗಿತ್ತು.
 

ಬಾಲಂಗೋಚಿ ಚಾಹಲ್ ಗೆ ಅಪರೂಪಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇತ್ತೀಚೆಗಿನ ದಿನಗಳಲ್ಲಿ ಭಾರತದ ಕೊನೆಯ ಕ್ರಮಾಂಕದ ಬ್ಯಾಟಿಂಗ್ ಕಣಕ್ಕಿಳಿಯುವುದು ಕಡಿಮೆ. ಆದರೆ ದ್ವಿತೀಯ ಏಕದಿನ ಪಂದ್ಯದಲ್ಲಿ ಅಪರೂಪಕ್ಕೆ ಬ್ಯಾಟಿಂಗ್ ಅವಕಾಶ ಪಡೆದ ಯಜುವೇಂದ್ರ ಚಾಹಲ್ ಒಂದು ಬೌಂಡರಿ ಹೊಡೆದಾಗ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು.

ಬೌಂಡರಿ ಹೊಡೆದಿದ್ದಕ್ಕೆ ಇಷ್ಟೆಲ್ಲಾ ಸಂಭ್ರಮೇಕೆ ಎಂದು ನಿಮಗನಿಸಬಹುದು. ಅದಕ್ಕೆ ಕಾರಣ ಇದು ಚಾಹಲ್ ಏಕದಿನ ಕ್ರಿಕೆಟ್ ನಲ್ಲಿ ಹೊಡೆದ ಮೊದಲ ಬೌಂಡರಿ. ಅದಕ್ಕೇ ಶತಕ ಗಳಿಸಿದವರಂತೆ ಬ್ಯಾಟ್ ಮೇಲೆತ್ತಿ ಆಕಾಶದತ್ತ ನೋಡಿ ನಗು ನಗುತ್ತಾ ಸಂಭ್ರಮಿಸಿದರು. ಕ್ರೀಸ್ ನ ಇನ್ನೊಂದು ತುದಿಯಲ್ಲಿದ್ದ ಕುಲದೀಪ್ ಯಾದವ್ ಕೂಡಾ ಚಾಹಲ್ ವರ್ತನೆ ನೋಡಿ ನಕ್ಕು ಹಗುರವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಟಿಂಗ್ ಮಾಡುತ್ತಿರುವಾಗಲೇ ಭಾರತೀಯ ಪ್ರೇಕ್ಷಕರು ಧೋನಿಯನ್ನು ಮೂದಲಿಸಿದ್ದೇಕೆ?