Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ವಿರುದ್ಧ ಸಿಟ್ಟಿಗೆದ್ದ ಸುನಿಲ್ ಗವಾಸ್ಕರ್

ರೋಹಿತ್ ಶರ್ಮಾ ವಿರುದ್ಧ ಸಿಟ್ಟಿಗೆದ್ದ ಸುನಿಲ್ ಗವಾಸ್ಕರ್
ಲಾರ್ಡ್ಸ್ , ಸೋಮವಾರ, 16 ಜುಲೈ 2018 (09:20 IST)
ಲಾರ್ಡ್ಸ್: ಮೊನ್ನೆಯಷ್ಟೇ ರೋಹಿತ್ ಶರ್ಮಾ ಅದ್ಭುತ ಆಟದ ಬಗ್ಗೆ ಹೊಗಳಿದ್ದ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ದ್ವಿತೀಯ ಪಂದ್ಯದಲ್ಲಿ ಅವರು ಔಟಾದ ರೀತಿ ನೋಡಿ ಕೆಂಡಾಮಂಡಲರಾಗಿದ್ದಾರೆ.

ಕಳೆದ ಎರಡು ಪಂದ್ಯಗಳಲ್ಲಿ ಸತತ ಶತಕ ಭಾರಿಸಿದ್ದ ರೋಹಿತ್ ಶರ್ಮಾರನ್ನು ಟೆಸ್ಟ್ ತಂಡಕ್ಕೆ ಪರಿಗಣಿಸಬೇಕು ಎಂದು ಗವಾಸ್ಕರ್ ಹೇಳಿದ್ದರು. ಅದರ ಬೆನ್ನಲ್ಲೇ ದ್ವಿತೀಯ ಪಂದ್ಯದಲ್ಲಿ ರೋಹಿತ್ ಔಟಾದ ರೀತಿಗೆ ಸಿಟ್ಟಿಗೆದ್ದಿದ್ದಾರೆ.

ಅಷ್ಟು ದೊಡ್ಡ ಮೊತ್ತ ಬೆನ್ನಟ್ಟುವಾಗ, ಕಳೆದ ಎರಡು ಪಂದ್ಯಗಳಲ್ಲಿ ಶತಕ ಗಳಿಸಿದ ಅನುಭವವಿರುವಾಗ ರೋಹಿತ್ ಇಷ್ಟು ಕಳಪೆ ಶಾಟ್ ಸೆಲೆಕ್ಷನ್ ಮಾಡಿ ಔಟಾದುದು ಸರಿಯಲ್ಲ. ಆತನ ಶಾಟ್ ಸೆಲಕ್ಷನ್ ಮೇಲೆ ನನಗೆ ಅನುಮಾನವಾಗುತ್ತಿದೆ. ಇದು ಅತಿಯಾದ ಆತ್ಮವಿಶ್ವಾಸದ ಪರಿಣಾಮ ಎಂದು ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತಿದ್ದ ಸುನಿಲ್ ಗವಾಸ್ಕರ್ ಕೆಂಡ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಶತಕ, ಅರ್ಧಶತಕ ಹೊಡೆಯದೆಯೂ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದ ಯಜುವೇಂದ್ರ ಚಾಹಲ್!