Select Your Language

Notifications

webdunia
webdunia
webdunia
webdunia

ಕ್ಯಾಪ್ಟನ್ ಕೊಹ್ಲಿಯನ್ನು ಈ ಕಾರ್ಟೂನ್ ಕ್ಯಾರೆಕ್ಟರ್ ಗೆ ಹೋಲಿಸಿದ ಶಿಖರ್ ಧವನ್

ಕ್ಯಾಪ್ಟನ್ ಕೊಹ್ಲಿಯನ್ನು ಈ ಕಾರ್ಟೂನ್ ಕ್ಯಾರೆಕ್ಟರ್ ಗೆ ಹೋಲಿಸಿದ ಶಿಖರ್ ಧವನ್
ಲಂಡನ್ , ಸೋಮವಾರ, 23 ಜುಲೈ 2018 (09:24 IST)
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕುವ ಧೈರ್ಯ ತಂಡದಲ್ಲಿ ಯಾರೂ ಮಾಡುವುದಿಲ್ಲ. ಆದರೆ ಅವರ ಆಪ್ತ ಮಿತ್ರ ಶಿಖರ್ ಧವನ್ ಕೊಹ್ಲಿಗೆ ಹೊಸದೊಂದು ಹೆಸರಿಟ್ಟಿದ್ದಾರೆ.

ಇಂಗ್ಲೆಂಡ್ ಸರಣಿಯ ಬಿಡುವಿನ ವೇಳೆಯಲ್ಲಿ ಕೊಹ್ಲಿ ಕುಟುಂಬದ ಸಮೇತ ತನ್ನ ಪರಿವಾರದೊಂದಿಗೆ ಸುತ್ತಾಡುತ್ತಿರುವ ಧವನ್ ಕೊಹ್ಲಿ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಕೊಹ್ಲಿಯ ಮುಖಭಾವಕ್ಕೆ ಅನುಸಾರವಾಗಿ ಅವರನ್ನು ಕಾರ್ಟೂನ್ ಕ್ಯಾರೆಕ್ಟರ್ ಟಾಮ್ ಆಂಡ ಜೆರ್ರಿಗೆ ಹೋಲಿಸಿದ್ದಾರೆ.

ಧವನ್ ರನ್ನು ಟೀಂ ಇಂಡಿಯಾದಲ್ಲಿ ಗಬ್ಬರ್ ಸಿಂಗ್ ಎಂದೇ ಕರೆಯುತ್ತಾರೆ. ಸ್ವತಃ ಕೊಹ್ಲಿ ಕೂಡಾ ಕೆಲವೊಮ್ಮೆ ಈ ಹೆಸರಿನಿಂದ ಕಿಚಾಯಿಸುವುದಿದೆ. ಇದೀಗ ಕೊಹ್ಲಿಗೇ ಧವನ್ ಹೊಸ ಹೆಸರು ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಯುವ ರಿಷಬ್ ಪಂತ್ ಬಗ್ಗೆ ರಾಹುಲ್ ದ್ರಾವಿಡ್ ಗೆ ಅದೆಂಥಾ ನಂಬಿಕೆ?