Select Your Language

Notifications

webdunia
webdunia
webdunia
webdunia

ಬಿಸಿಸಿಐ ನಿರ್ಲಕ್ಷ್ಯಕ್ಕೆ ಕೊನೆಯಾಯಿತೇ ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಭವಿಷ್ಯ?!

ಬಿಸಿಸಿಐ ನಿರ್ಲಕ್ಷ್ಯಕ್ಕೆ ಕೊನೆಯಾಯಿತೇ ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಭವಿಷ್ಯ?!
ಮುಂಬೈ , ಮಂಗಳವಾರ, 24 ಜುಲೈ 2018 (09:15 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ಖಾಯಂ ವಿಕೆಟ್ ಕೀಪರ್ ಆಗಿದ್ದ ವೃದ್ಧಿಮಾನ್ ಸಹಾ ಇತ್ತೀಚೆಗಿನ ದಿನಗಳಲ್ಲಿ ಗಾಯದ ನೆಪದಿಂದ ತಂಡದಲ್ಲಿಲ್ಲ. ಆದರೆ ಬಿಸಿಸಿಐ ನಿರ್ಲಕ್ಷ್ಯದಿಂದ ಈ ಕ್ರಿಕೆಟಿಗನ ಭವಿಷ್ಯವೇ ಮಂಕಾಗಿದೆಯೇ?

ಮೊದಲು ಸಹಾ ಬೆರಳಿನ ಗಾಯದಿಂದಾಗಿ ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್ ಆಡಲಿಲ್ಲ ಎಂದು ಸುದ್ದಿಹಬ್ಬಿತ್ತು. ಆದರೆ ಇಂಗ್ಲೆಂಡ್ ವಿರುದ್ಧವೂ ಅವರು ತಂಡಕ್ಕೆ ಆಯ್ಕೆಯಾಗದೇ ಇದ್ದಾಗ ಅವರ ಸಮಸ್ಯೆಯ ಬಗ್ಗೆ ಮತ್ತಷ್ಟು ಅನುಮಾನಗಳು ಮೂಡಿದವು.

ಇದೀಗ ಬಿಸಿಸಿಐ ಅಧಿಕೃತವಾಗಿ ಅವರ ಗಾಯದ ಕುರಿತು ಮಾಹಿತಿ ನೀಡುತ್ತಿಲ್ಲ. ಆದರೆ ತನ್ನ ವೆಬ್ ಸೈಟ್ ನಲ್ಲಿ ಸಹಾ ಹೆಗಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ. ಇದುವರೆಗೆ ಮೂರು ವೈದ್ಯರ ಬಳಿ ತಪಾಸಣೆ ನಡೆಸಿ ಎರಡು ಬಾರಿ ಇಂಜಕ್ಷನ್ ಹಾಕಿಸಿಕೊಂಡಿದ್ದಾರೆ. ಇನ್ನು ಮ್ಯಾಂಚೆಸ್ಟರ್ ನಲ್ಲಿ ಹೆಗಲಿನ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಒಂದು ವೇಳೆ ಅವರು ಸರಿಯಾಗಿ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಬಾಲ್ ಎತ್ತಿಕೊಳ್ಳುವುದೂ ಕಷ್ಟ ಎಂಬ ಸುದ್ದಿ ಬಂದಿದೆ.

ಆದರೆ ಇದುವರೆಗೆ ಬಿಸಿಸಿಐ ಯಾಕೆ ಇವರ ಗಾಯದ ಬಗ್ಗೆ ನಿರ್ಲಕ್ಷ್ಯ ವಹಿಸಿತು ಎಂಬ ಪ್ರಶ್ನೆ ಮೂಡಿದೆ. ಇದೀಗ ಸುಮಾರು ಒಂದು ವರ್ಷ ಸಹಾ ಕ್ರಿಕೆಟ್ ಆಡುವಂತಿಲ್ಲ. ಅವರು ಮರಳಿ ಬರುವಾಗ ವಯಸ್ಸು 34 ಆಗಿರುತ್ತದೆ. ಅಷ್ಟರಲ್ಲಿ ಭಾರತ ತಂಡಕ್ಕೆ ಮತ್ತೊಬ್ಬ ವಿಕೆಟ್ ಕೀಪರ್ ಸ್ಥಾನ ಭದ್ರಪಡಿಸಿಯಾಗಿರುತ್ತದೆ. ಹೀಗಾಗಿ ಸಹಾ ವೃತ್ತಿ ಬದುಕು ಟೀಂ ಇಂಡಿಯಾದಲ್ಲಿ ಬಹುತೇಕ ಬಾಗಿಲು ಮುಚ್ಚಿದಂತೆಯೇ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯನ್ನು ಕಾಪಿ ಮಾಡಲು ಹೋಗಿ ಕೈ ಸುಟ್ಟುಕೊಂಡ ಪಾಕ್ ನಾಯಕ ಸರ್ಫರಾಜ್ ಅಹಮ್ಮದ್