Publish Date: Mon, 24 Oct 2022 (17:22 IST)
Updated Date: Mon, 24 Oct 2022 (17:23 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ರೋಚಕವಾಗಿ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಈ ಪಂದ್ಯದಲ್ಲಿ ಕೊಹ್ಲಿ ಮತ್ತು ಹಾರ್ದಿಕ್ ಜೊತೆಯಾಟವಾಡಿದ್ದರು. ಈ ವೇಳೆ ತಮ್ಮಿಬ್ಬರ ಗೇಮ್ ಪ್ಲ್ಯಾನ್ ಏನಾಗಿತ್ತು ಎಂಬುದನ್ನು ಕೊಹ್ಲಿ ವಿವರಿಸಿದ್ದಾರೆ.
ಹಾರ್ದಿಕ್ ನನಗೆ ನಮ್ಮಿಂದ ಸಾಧ್ಯ. ನಾವು ಕೊನೆಯವರೆಗೆ ಬ್ಯಾಟ್ ಮಾಡೋಣ ಎಂದು ಪ್ರೋತ್ಸಾಹಿಸುತ್ತಿದ್ದರು. ಹ್ಯಾರಿಸ್ ರೌಫ್ ರನ್ನು ದಂಡಿಸಿದರೆ ಪಾಕಿಸ್ತಾನ ಭಯಪಡುತ್ತದೆ ಎಂದು ನಾನು ಹಾರ್ದಿಕ್ ಗೆ ಹೇಳಿದೆ. ಅದೇ ರೀತಿ ನಾನು ಎರಡು ಸಿಕ್ಸರ್ ಸಿಡಿಸಿದೆ. ಇಲ್ಲದೇ ಹೋಗಿದ್ದರೆ ನಾವು ಪಂದ್ಯ ಕಳೆದುಕೊಳ್ಳಬೇಕಾಗಿತ್ತು ಎಂದು ಕೊಹ್ಲಿ ವಿವರಿಸಿದ್ದಾರೆ.
-Edited by Rajesh Patil