Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಗೆದ್ದಿದ್ದು ಮೋಸದಿಂದ: ಪಾಕ್ ಆರೋಪ

ಟೀಂ ಇಂಡಿಯಾ ಗೆದ್ದಿದ್ದು ಮೋಸದಿಂದ: ಪಾಕ್ ಆರೋಪ
ಮೆಲ್ಬೋರ್ನ್ , ಸೋಮವಾರ, 24 ಅಕ್ಟೋಬರ್ 2022 (09:40 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲ್ಲುತ್ತಿದ್ದ ಪಂದ್ಯವನ್ನು ಸೋತಿದ್ದು ಪಾಕ್ ಹತಾಶೆಗೆ ಕಾರಣವಾಗಿದೆ.

ಅಂತಿಮ ಓವರ್ ನಲ್ಲಿ ನವಾಜ್ ಎಸೆದ ಬಾಲ್ ನ್ನು ಕೊಹ್ಲಿ ಸಿಕ್ಸರ್ ಗಟ್ಟಿದ್ದರು. ಇದನ್ನು ಅಂಪಾಯರ್ ನೋ ಬಾಲ್ ಎಂದು ಪರಿಗಣಿಸಿದ್ದರು. ಈ ಎಸೆತ ಪಂದ್ಯದ ದಿಕ್ಕನ್ನು ಬದಲಿಸಿತು. ಅಂಪಾಯರ್ ನೋ ಬಾಲ್ ಎಂದಾಗಲೇ ಪಾಕ್ ಆಟಗಾರರು ಅಂಪಾಯರ್ ಗೆ ಪ್ರಶ್ನೆ ಮಾಡಿದ್ದರು.

ಪಂದ್ಯದ ಬಳಿಕ ಪಾಕ್ ಮಾಜಿ ಆಟಗಾರರು, ಅಭಿಮಾನಿಗಳು ಭಾರತ ಮೋಸದಿಂದ ಗೆದ್ದಿದೆ ಎಂದು ಆರೋಪಿಸಿದ್ದಾರೆ. ಸ್ವತಃ ಪಾಕ್ ಕ್ರಿಕೆಟ್ ಮಂಡಳಿ ಆ ಎಸೆತದ ಹಾಕ್ ಐ ಫೋಟೋ ಪ್ರಕಟಿಸಿದ್ದು, ಇದು ನೋ ಬಾಲ್ ಆಗಿರಲಿಲ್ಲ, ಯಾರ್ಕರ್ ಎಸೆತವಾಗಿತ್ತು ಎಂದು ಪ್ರತಿಪಾದಿಸಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಪಂದ್ಯ ಮುಗಿದ ಬಳಿಕ ‘ಇಂದಿರಾ ನಗರ್ ಕೀ ಗೂಂಡಾ’ ಆದ ರಾಹುಲ್ ದ್ರಾವಿಡ್!