ಮುಂಬೈ: ಇದುವರೆಗೆ ನಡೆದ 6 ವಿಶ್ವಕಪ್ ಗಳಲ್ಲಿ ಭಾರತದ ಪರ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದವರು ಯಾರು ಎಂದು ನೋಡೋಣ.
ಟೀಂ ಇಂಡಿಯಾ ಪರ ಟಿ20 ವಿಶ್ವಕಪ್ ನಲ್ಲಿ ಏಕೈಕ ಶತಕ ದಾಖಲಾಗಿದ್ದು ಸುರೇಶ್ ರೈನಾರಿಂದ. ಅವರು ದ.ಆಫ್ರಿಕಾ ವಿರುದ್ಧ 101 ರನ್ ಗಳಿಸಿದ್ದು ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತ.
ಇದಾದ ಬಳಿಕ ವಿರಾಟ್ ಕೊಹ್ಲಿ ಎರಡು ಬಾರಿ ಶತಕದ ಸಮೀಪ ಬಂದು ಎಡವಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಒಮ್ಮೆ 89 ಮತ್ತು ಆಸ್ಟ್ರೇಲಿಯಾ ವಿರುದ್ಧ ಮತ್ತೊಮ್ಮೆ 82 ರನ್ ಗಳಿಸಿ ಕೊಹ್ಲಿ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಮತ್ತೆ ಅಜೇಯ 82 ರನ್ ಗಳಿಸಿ ಮತ್ತೊಮ್ಮೆ ಎರಡನೇ ಸ್ಥಾನ ಭದ್ರಪಡಿಸಿದರು. ಈ ಬಾರಿ ಈ ದಾಖಲೆಗಳು ಉಡೀಸ್ ಆಗುವ ಎಲ್ಲಾ ಸಾಧ‍್ಯತೆಗಳಿವೆ.
-Edited by Rajesh Patil