Publish Date: Mon, 24 Oct 2022 (08:10 IST)
Updated Date: Mon, 24 Oct 2022 (08:43 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ಪಂದ್ಯದ ಮೊದಲ ಪಂದ್ಯದಲ್ಲೇ ಪಾಕ್ ವಿರುದ್ಧ ರೋಚಕವಾಗಿ ಕೊನೆಯ ಬಾಲ್ ನಲ್ಲಿ ಗೆದ್ದು 4 ವಿಕೆಟ್ ಗಳ ಗೆಲುವು ಕಂಡ ಟೀಂ ಇಂಡಿಯಾ ಶುಭಾರಂಭ ಮಾಡಿದೆ.
2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾರ ನೋ ಬಾಲ್ ಪಾಕ್ ಗೆಲುವಿಗೆ ಮುನ್ನುಡಿ ಬರೆದಿತ್ತು. ಇದೀಗ ಭಾರತವೂ ಪಾಕ್ ಬೌಲರ್ ಮೊಹಮ್ಮದ್ ನವಾಜ್ ರ ನೋ ಬಾಲ್ ನಿಂದಲೇ ಗೆದ್ದಿದೆ.
19.4 ಓವರ್ ಗಳಲ್ಲಿ ಭಾರತಕ್ಕೆ 11 ರನ್ ಬೇಕಾಗಿತ್ತು. ಈ ವೇಳೆ ನವಾಜ್ ನೋ ಬಾಲ್ ಎಸೆದಿದ್ದರು. ಈ ಎಸೆತಕ್ಕೆ ಕೊಹ್ಲಿ ಸಿಕ್ಸರ್ ಸಿಡಿಸಿದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು. ಭಾರತ ಗೆಲುವಿಗೆ ಈ ನೋ ಬಾಲ್ ಕಾರಣವಾಯಿತು.
-Edited by Rajesh Patil