Publish Date: Mon, 24 Oct 2022 (09:10 IST)
Updated Date: Mon, 24 Oct 2022 (09:12 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಮಿಂಚಿದ್ದ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಮತ್ತೆ ಮುಖ್ಯ ಈವೆಂಟ್ ಆರಂಭವಾದಾಗ ರನ್ ಗಳಿಸಲು ವಿಫಲರಾದರು.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರಾಹುಲ್ 8 ಎಸೆತ ಎದುರಿಸಿ ಕೇವಲ 4 ರನ್ ಗಳಿಸಿ ಔಟಾದರು. ಅವರು ಔಟಾದಾಗ ನಾಯಕ ರೋಹಿತ್ ಶರ್ಮಾ ತೀವ್ರ ಅಸಮಾಧಾನಗೊಂಡರು. ಬಳಿಕ ಅವರೂ ಅಷ್ಟೇ ರನ್ ಗಳಿಸಿ ಔಟಾಗಿದ್ದರು ಎಂಬುದನ್ನು ಗಮನಿಸಬೇಕು.
ಆದರೆ ರಾಹುಲ್ ಮಹತ್ವದ ಪಂದ್ಯಗಳಲ್ಲೇ ಕೈಕೊಡುತ್ತಿರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್ ಆಗಿದ್ದಾರೆ. ರಾಹುಲ್ ರನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಅವರು ಪ್ರಮುಖ ಪಂದ್ಯಗಳಲ್ಲೇ ಕೈಕೊಡುವ ಚಾಳಿಯನ್ನು ಯಾವತ್ತೂ ಬಿಡಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
-Edited by Rajesh Patil