Publish Date: Mon, 24 Oct 2022 (09:26 IST)
Updated Date: Mon, 24 Oct 2022 (09:26 IST)
ಮೆಲ್ಬೋರ್ನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ ಗೆದ್ದ ಬಳಿಕ ಕೋಚ್ ರಾಹುಲ್ ದ್ರಾವಿಡ್ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ.
ದ್ರಾವಿಡ್ ಸಂಭ್ರಮಿಸಿದ ಪರಿ ಯಾವ ರೀತಿ ಇತ್ತೆಂದರೆ ಕೆಲವು ದಿನಗಳ ಮೊದಲು ಅವರು ನಟಿಸಿದ್ದ ಇಂದಿರಾ ನಗರ್ ಕೀ ಗೂಂಡಾ ಜಾಹೀರಾತು ನೆನಪಿಸುವಂತಿತ್ತು.
ಡಗ್ ಔಟ್ ನಲ್ಲಿ ಕೂತಿದ್ದ ದ್ರಾವಿಡ್ ಕುಣಿದು ಕುಪ್ಪಳಿಸಿ, ಕಿರುಚಾಡಿ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ಎಂತಹದ್ದೇ ಖುಷಿ, ಒತ್ತಡವಿದ್ದರೂ ಶಾಂತವಾಗಿರುವ ದ್ರಾವಿಡ್ ಈ ರೀತಿ ಸಂಭ್ರಮಿಸಿದ್ದು ನೋಡಿ ಅಭಿಮಾನಿಗಳೂ ಖುಷಿಪಟ್ಟಿದ್ದಾರೆ.
-Edited by Rajesh Patil