ಮುಂಬೈ: ಟೀಂ ಇಂಡಿಯಾದ ಫಿಟ್ಟೆಸ್ಟ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಾಲ್ಯದಲ್ಲಿ ಎಂಥಾ ತಿಂಡಿಪೋತ ಎನ್ನುವುದನ್ನು ಅವರೇ ಅನೇಕ ಬಾರಿ ಹೇಳಿಕೊಂಡಿದ್ದರು. ಈಗ ಅದನ್ನು ಸಾಕ್ಷಿ ಸಮೇತ ತೋರಿಸಿದ್ದಾರೆ.
ಪುಟಾಣಿ ಕೊಹ್ಲಿ ತಟ್ಟೆ ತುಂಬಾ ಭರ್ಜರಿ ಭೋಜನವಿಟ್ಟುಕೊಂಡು ಸವಿಯುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಕೊಹ್ಲಿ ತಾನೆಂಥಾ ತಿಂಡಿಪೋತನಾಗಿದ್ದೆ ಎಂದು ತೋರಿಸಿಕೊಟ್ಟಿದ್ದಾರೆ.
ಜೊತೆಗೆ ತಿನ್ನು, ಕುಡಿ, ಮಜಾ ಮಾಡಿ. ಹೃದಯದಲ್ಲಿ ಯಾವುದೇ ಬೇಸರ ಇಟ್ಟುಕೊಳ್ಳಬೇಡಿ ಎಂದು ಕೊಹ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.