ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಆಯ್ಕೆ ಮಾಡಲು ಆಯ್ಕೆ ಸಮಿತಿ ದಿನ ನಿಗದಿ ಮಾಡಿಕೊಂಡಿದೆ.
ಮೂಲಗಳ ಪ್ರಕಾರ ಆಯ್ಕೆ ಸಮಿತಿ ಸೆಪ್ಟೆಂಬರ್ 16 ರಂದು ಸಭೆ ಸೇರಿ ಟೀಂ ಇಂಡಿಯಾ ಘೋಷಣೆ ಮಾಡುವ ಸಾಧ್ಯತೆಯಿದೆ.
ಈಗಾಗಲೇ ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಬಹುತೇಕ ಅಂತಿಮಗೊಳಿಸಿದ್ದಾರೆ.
ಹಾಗಿದ್ದರೂ ಏಷ್ಯಾ ಕಪ್ ನಲ್ಲಿ ಭಾರತದ ಬೌಲಿಂಗ್ ಹೀನಾಯವಾಗಿತ್ತು. ಹೀಗಾಗಿ ಬೌಲಿಂಗ್ ಪಡೆಗೆ ಕೆಲವು ಹೊಸ ಸೇರ್ಪಡೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬ್ಯಾಟಿಗರು ಏಷ್ಯಾ ಕಪ್ ನಲ್ಲಿ ಆಡಿದವರೇ ವಿಶ್ವಕಪ್ ಗೂ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.