ಸಿಡ್ನಿ: ಬಿಡುವಿಲ್ಲದ ಕ್ರಿಕೆಟ್ ನಿಂದ ಬಳಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಈಗ ಕುಟುಂಬದ ಜೊತೆ ಕಾಲ ಕಳೆಯಲು ಬಿಡುವು ಪಡೆದಿದ್ದಾರೆ.
ಪ್ರಸಕ್ತ ನಡೆಯುತ್ತಿರುವ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಮೊದಲು ವಾರ್ನರ್ ತಂಡದಿಂದ ಹೊರನಡೆದಿದ್ದಾರೆ.
ಟಿ20 ವಿಶ್ವಕಪ್ ಗೆ ಮುನ್ನ ಪತ್ನಿ, ಮಕ್ಕಳ ಜೊತೆ ಕಾಲ ಕಳೆಯಲು ಏಕದಿನ ಸರಣಿಯಿಂದ ಹೊರಬಂದಿರುವ ವಾರ್ನರ್ ಮುಂಬರುವ ಭಾರತದ ವಿರುದ್ಧದ ಟಿ20 ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದಾರೆ. ಟಿ20 ಸರಣಿಗೆ ವಾರ್ನರ್ ಸೇವೆ ಆಸ್ಟ್ರೇಲಿಯಾಕ್ಕೆ ಅಗತ್ಯ. ಹೀಗಾಗಿ ಅವರಿಗೆ ಗಾಯದ ಸಮಸ್ಯೆಗಳಾಗದಂತೆ ವಿಶ್ರಾಂತಿ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ತೀರ್ಮಾನಿಸಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!