ಸಿಡ್ನಿ: ಟೀಂ ಇಂಡಿಯಾ ವಿರುದ್ಧ ಸೆಪ್ಟೆಂಬರ್ ಅಂತ್ಯಕ್ಕೆ ನಡೆಯಲಿರುವ ಟಿ20 ಸರಣಿಗೆ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಗೆ ಆಸ್ಟ್ರೇಲಿಯಾ ವಿಶ್ರಾಂತಿ ನೀಡಿದೆ.
ಸೆಪ್ಟೆಂಬರ್ 20 ರಿಂದ 25 ರವರೆಗೆ ಭಾರತದಲ್ಲಿ ಟಿ20 ಸರಣಿ ನಡೆಯಲಿದೆ. ಈ ಸರಣಿಗೆ ವಾರ್ನರ್ ಬದಲು ಕ್ಯಾಮರೂನ್ ಗ್ರೀನ್ ಗೆ ಅವಕಾಶ ನೀಡಲಾಗಿದೆ.
ವಾರ್ನರ್ ಭಾರತದ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಆದರೆ ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಬೇಕಿರುವುದರಿಂದ ಪ್ರಮುಖ ಆಟಗಾರ ವಾರ್ನರ್ ಗೆ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಟ್ರೇಲಿಯಾ ವಿಶ್ರಾಂತಿ ನೀಡಿದೆ. ಆಸ್ಟ್ರೇಲಿಯಾ ಭಾರತದ ವಿರುದ್ಧದ ಸರಣಿಗೆ ಏರಾನ್ ಫಿಂಚ್ ನಾಯಕತ್ವದ 15 ಸದಸ್ಯರ ತಂಡ ಪ್ರಕಟಿಸಿದೆ.