Publish Date: Fri, 06 May 2022 (09:00 IST)
Updated Date: Fri, 06 May 2022 (09:05 IST)
ಮುಂಬೈ: ಐಪಿಎಲ್ 2022 ರಲ್ಲಿ ನಿನ್ನೆಯ ಪಂದ್ಯದಲ್ಲಿ ತಮ್ಮ ಹಳೆಯ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಗ ಡೇವಿಡ್ ವಾರ್ನರ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ ಗೆಲುವಿಗೆ ಕಾರಣರಾಗಿದ್ದರು.
ಹೈದರಾಬಾದ್ ತಂಡದ ಜೊತೆ ಕೆಲವು ವರ್ಷ ಆಡಿದ್ದ ವಾರ್ನರ್ ಗೆ ಈ ತಂಡದ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು. ಕಳಪೆ ಫಾರ್ಮ್ ನಿಂದಾಗಿ ವಾರ್ನರ್ ರನ್ನು ಹೈದರಾಬಾದ್ ಕೈ ಬಿಟ್ಟಿತ್ತು.
ಆದರೆ ಈಗ ವಾರ್ನರ್ ಅದೇ ತಂಡದ ವಿರುದ್ಧ ಭರ್ಜರಿ 92 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಇದಾದ ಬಳಿಕ ಹಳೆಯ ತಂಡದ ನಾಯಕ ಕೇನ್ ವಿಲಿಯಮ್ಸನ್ ರನ್ನು ಭೇಟಿ ಮಾಡಿದ ವಾರ್ನರ್ ಸೆಲ್ಫೀ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ.