ಮುಂಬೈ: ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಔಟಾದಾಗ ವಿರಾಟ್ ಕೊಹ್ಲಿ ಸಂಭ್ರಮಿಸಿದ ರೀತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾನ್ಯವಾಗಿ ಕೊಹ್ಲಿ ಯಾರದ್ದೇ ವಿಕೆಟ್ ಬಿದ್ದರೂ ಆಕ್ರಮಣಕಾರಿಯಾಗಿ ಸೆಲೆಬ್ರೇಷನ್ ಮಾಡುತ್ತಾರೆ. ಆದರೆ ಧೋನಿಯ ಬಗ್ಗೆ ಅವರಿಗೆ ವಿಶೇಷ ಗೌರವವಿದೆ.
ಹಾಗಿದ್ದರೂ ಧೋನಿ ಔಟಾದಾಗ ಗೊಣಗಿಕೊಂಡು ಸಂಭ್ರಮಿಸಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೊಹ್ಲಿಗೆ ಈ ಮಟ್ಟಿನ ಸಂಭ್ರಮ ಬೇಕಿರಲಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.