Publish Date: Fri, 06 May 2022 (09:36 IST)
Updated Date: Fri, 06 May 2022 (09:31 IST)
ಮುಂಬೈ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಇಂದು ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗುತ್ತಿದ್ದಾರೆ.
ಎಂಎಸ್ಡಿ CSK ನಾಯಕತ್ವಕ್ಕೆ ಮರಳುತ್ತಿದ್ದಂತೆ ಜಯದ ಹಾದಿ ಹಿಡಿದಿರುವ ಚೆನ್ನೈ ಕಳೆದ ವಾರ ಹೈದ್ರಾಬಾದ್ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಕಳೆದ 9 ಪಂದ್ಯಗಳಲ್ಲಿ ಸಿಎಸ್ಕೆ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ.
ಹಾಗೆಯೇ ಸತತ 2 ಪಂದ್ಯಗಳಲ್ಲಿ ಸೋಲು ಕಂಡಿರುವ ಆರ್ಸಿಬಿ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳುವ ತವಕದಲ್ಲಿದೆ. ಕಳೆದ ಪಂದ್ಯದಿಂದ ಬ್ಯಾಟಿಂಗ್ ಲಯಕ್ಕೆ ಮರಳಿರುವ ಕೊಹ್ಲಿ ಇಂದೂ ಉತ್ತಮ ಆಟವಾಡುವ ನಿರೀಕ್ಷೆ ಇದೆ.
ಇಂದು ನಾಯಕ ಧೋನಿ ಸಿಎಸ್ಕೆ ನೆಚ್ಚಿನ ಎದುರಾಳಿಯಾಗಿರುವ ಖಅಃ ತಂಡವನ್ನು ಎದುರಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗುತ್ತಿದ್ದಾರೆ. ಇಂದು ಐಪಿಎಲ್ನಲ್ಲಿ ತನ್ನ 200ನೇ ಪಂದ್ಯವನ್ನಾಡಲಿದ್ದು, ಒಂದೇ ಫ್ರಾಂಚೈಸಿಯಲ್ಲಿ 200 ಪಂದ್ಯಗಳನ್ನು ಆಡಿದ 2ನೇ ಆಟಗಾರ (ಭಾರತೀಯ) ಎಂಬ ಖ್ಯಾತಿಗೆ ಪಾತ್ರವಾಗುತ್ತಿದ್ದಾರೆ.
RCB ಹಾಗೂ ಚೆನ್ನೈ ತಂಡಗಳು ಈವರೆಗೆ 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ 19 ಪಂದ್ಯಗಳಲ್ಲಿ ಜಯ ಸಾಸಿಧಿಸಿದ್ದರೆ, RCB ಕೇವಲ 9 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ 29ನೇ ಪಂದ್ಯ ನಡೆಯಲಿದೆ.