Select Your Language

Notifications

webdunia
webdunia
webdunia
webdunia

ಪದೇ ಪದೇ ವೈಡ್ ತೀರ್ಪು ನೀಡಿದ ಅಂಪಾಯರ್ ವಿರುದ್ಧ ಸಂಜು ಸ್ಯಾಮ್ಸನ್ ಅಸಮಾಧಾನ

ಪದೇ ಪದೇ ವೈಡ್ ತೀರ್ಪು ನೀಡಿದ ಅಂಪಾಯರ್ ವಿರುದ್ಧ ಸಂಜು ಸ್ಯಾಮ್ಸನ್ ಅಸಮಾಧಾನ
ಮುಂಬೈ , ಮಂಗಳವಾರ, 3 ಮೇ 2022 (08:30 IST)
ಮುಂಬೈ: ಐಪಿಎಲ್ 2022 ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪದೇ ಪದೇ ತಮ್ಮ ತಂಡದ ಬೌಲರ್ ಪ್ರಸಿದ್ಧ ಕೃಷ್ಣ ಎಸೆತವನ್ನು ವೈಡ್ ಎಂದು ಘೋಷಿಸಿದ ಅಂಪಾಯರ್ ನಿತಿನ್ ಪಂಡಿತ್ ವಿರುದ್ಧ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಅಸಮಾಧಾನ ಹೊರಹಾಕಿದರು.

ಚೇಸಿಂಗ್ ವೇಳೆ ನಿರ್ಣಾಯಕ ಘಟ್ಟದಲ್ಲಿ 19 ನೇ ಓವರ್ ಬೌಲಿಂಗ್ ಮಾಡಲು ಹೊರಟ ಪ್ರಸಿದ್ಧ ಕೃಷ್ಣ ಯಾರ್ಕರ್ ಎಸೆಯುವ ಪ್ರಯತ್ನದಲ್ಲಿ ಎರಡು ಬಾರಿ ಎಡವಿದರು. ಬಾಲ್ ಕೊಂಚ ಅಗಲವಾಗಿ ಚಿಮ್ಮಿತು. ಹೀಗಾಗಿ ಅಂಪಾಯರ್ ಇದನ್ನು ವೈಡ್ ಎಂದು ಘೋಷಿಸಿದರು. ಬಳಿಕ ಪ್ರಸಿದ್ಧ ನೇರ ಎಸೆತಗಳನ್ನು ಎಸೆದಾಗ ಬ್ಯಾಟಿಗ ಬೌಂಡರಿ ಗಳಿಸಿದರು.

ಹೀಗಾಗಿ ಸಿಟ್ಟಿಗೆದ್ದ ಸಂಜು ಸ್ಯಾಮ್ಸನ್ ಅಂಪಾಯರ್ ಬಳಿ ತೆರಳಿ ತಮ್ಮ ಅಸಮಾಧಾನ ಹೊರಹಾಕಿದರು. ನೆಟ್ಟಿಗರು ಈ ಘಟನೆಗೆ ಪ್ರತಿಕ್ರಿಯಿಸಿದ್ದು, ಅಂಪಾಯರ್ ಪಂದ್ಯಕ್ಕೆ ತಿರುವು ನೀಡಿದರು ಎಂದು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ತೆಂಡುಲ್ಕರ್ ಗೆ ಒಂದು ಚಾನ್ಸ್ ಕೊಡಿ! ಫ್ಯಾನ್ಸ್ ಆಗ್ರಹ