Publish Date: Mon, 02 May 2022 (09:30 IST)
Updated Date: Mon, 02 May 2022 (09:35 IST)
ಮುಂಬೈ: ಕಳಪೆ ಪ್ರದರ್ಶನ ಹಿನ್ನಲೆಯಲ್ಲಿ ತಂಡದ ನಾಯಕತ್ವವನ್ನು ಮತ್ತೆ ತಮಗೇ ಮರಳಿಸಿದ ರವೀಂದ್ರ ಜಡೆಜಾ ನಿರ್ಧಾರದ ಬಗ್ಗೆ ಧೋನಿ ನಿನ್ನೆಯ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಕಳೆದ ಬಾರಿಯೇ ಜಡೇಜಾಗೆ ಮುಂದಿನ ಋತುವಿನಿಂದ ತಾವೇ ನಾಯಕ ಎನ್ನುವುದು ಗೊತ್ತಿತ್ತು. ಹಾಗಿದ್ದರೂ ಈ ಬಾರಿ ಮೊದಲ ಎರಡು ಪಂದ್ಯದಲ್ಲಿ ನಾನು ಅವರ ಕೆಲಸಕ್ಕೆ ಸಹಾಯ ಮಾಡಿದೆ. ಅವರೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಬಯಸಿದೆ. ಎಲ್ಲವನ್ನೂ ಹೇಳಿಕೊಡಲಾಗದು. ನಾಯಕನಾದ ತಕ್ಷಣ ಜವಾಬ್ಧಾರಿ ಹೆಚ್ಚುತ್ತದೆ. ಅದು ಆಟದ ಮೇಲೆ ಪರಿಣಾಮ ಬೀರುವುದು ಸಹಜ. ಈಗ ಜಡೇಜಾ ತಮ್ಮ ಆಟದ ಮೇಲೆ ಗಮನಹರಿಸಲು ಬಯಸಿದ್ದಾರೆ ಎಂದು ಧೋನಿ ಹೇಳಿದ್ದಾರೆ.