Publish Date: Tue, 03 May 2022 (07:40 IST)
Updated Date: Tue, 03 May 2022 (07:42 IST)
ಮುಂಬೈ: ಐಪಿಎಲ್ 2022 ರಲ್ಲೂ ಮುಂಬೈ ಇಂಡಿಯನ್ಸ್ ಪಾಳಯ ಸೇರಿಕೊಂಡಿರುವ ಅರ್ಜುನ್ ತೆಂಡುಲ್ಕರ್ ಇದುವರೆಗೆ ಆಡುವ ಅವಕಾಶ ಪಡೆದಿಲ್ಲ.
ನೆಟ್ಸ್ ನಲ್ಲಿ ಬೌಲಿಂಗ್ ಮೂಲಕ ಗಮನಸೆಳೆದಿರುವ ಅರ್ಜುನ್ ತೆಂಡುಲ್ಕರ್ ಗೆ ಒಂದೇ ಒಂದು ಅವಕಾಶ ಕೊಡಿ ಎಂದು ಫ್ಯಾನ್ಸ್ ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.
ಇದೀಗ ಮತ್ತೆ ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ಬೌಲಿಂಗ್ ಮಾಡುತ್ತಿರುವ ವಿಡಿಯೋ ಪ್ರಕಟಿಸಿದೆ. ಇದನ್ನು ನೋಡಿ ನೆಟ್ಟಿಗರು ಸದ್ಯದಲ್ಲೇ ಅರ್ಜುನ್ ಐಪಿಎಲ್ ನಲ್ಲಿ ಆಡಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.