ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪತ್ನಿ ಅನುಷ್ಕಾ ಶರ್ಮಾರ ಸುಂದರ ಭಾವಚಿತ್ರವೊಂದನ್ನು ಪ್ರಕಟಿಸಿದ್ದರು. ಇದಕ್ಕೆ ಕಾಮೆಂಟ್ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಟ್ರೋಲ್ ಗೊಳಗಾಗಿದ್ದರು.
ಕೊನೆಗೆ ಸ್ವತಃ ಕೊಹ್ಲಿಯೇ ಕಾಮೆಂಟ್ ಮಾಡಿ ಟ್ರೋಲಿಗರ ಬಾಯಿ ಮುಚ್ಚಿಸಬೇಕಾಯಿತು. ಅನುಷ್ಕಾ ಫೋಟೋಗೆ ವಾರ್ನರ್ ನೀನು ತುಂಬಾ ಅದೃಷ್ಟವಂತ ಎಂದು ಕಾಮೆಂಟ್ ಮಾಡಿದ್ದರು.
ಇದನ್ನು ನೋಡಿ ನೆಟ್ಟಿಗರು ಇನ್ನೊಬ್ಬರ ಪತ್ನಿಗೆ ಈ ರೀತಿಯ ಕಾಮೆಂಟ್ ಮಾಡಬೇಡಿ. ಇದು ಸಭ್ಯತೆಯಲ್ಲ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಮತ್ತೆ ಕೆಲವರು ಮತ್ತೆ ನೀವು ಮನೆಗೆ ಹೋದಾಗ ಪತ್ನಿ ಜೊತೆ ಹುಷಾರು ಎಂದು ಟ್ರೋಲ್ ಮಾಡಿದ್ದರು. ಇದೆಲ್ಲಾ ಬೆಳವಣಿಗೆ ಬಳಿಕ ಕೊಹ್ಲಿ ವಾರ್ನರ್ ಕಾಮೆಂಟ್ ಗೆ ಪ್ರತಿಕ್ರಿಯಿಸಿದ್ದು, ನನಗೆ ಗೊತ್ತು ಗೆಳೆಯ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.