Publish Date: Fri, 02 Sep 2022 (14:34 IST)
Updated Date: Fri, 02 Sep 2022 (14:38 IST)
ವಿಕಾಸ್ ಕೊಹ್ಲಿ ಅವರು 19 ಕೋಟಿ 24 ಲಕ್ಷ 50 ಸಾವಿರಕ್ಕೆ ಡೀಲ್ ಪಡೆದು ಮಂಗಳವಾರ 1 ಕೋಟಿ 15 ಲಕ್ಷ 45 ಸಾವಿರ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಭೂಮಿಯನ್ನು ವಿರಾಟ್ ಕೊಹ್ಲಿ ಹೆಸರಿಗೆ ಮಾಡಿಸಿದ್ದಾರೆ.
ಗಣೇಶ ಚತುರ್ಥಿಯ ಒಂದು ದಿನ ಮೊದಲು ಅಂದರೆ ಆಗಸ್ಟ್ 30 ರಂದು (ಮಂಗಳವಾರ), ವಿರಾಟ್ ಕೊಹ್ಲಿ ಪರವಾಗಿ, ಅವರ ಸಹೋದರ ವಿಕಾಸ್ ಕೊಹ್ಲಿ ಮುಂಬೈ ಪಕ್ಕದ ಆಲಿಬಾಗ್ (Alibaug area adjacent to Mumbai) ಪ್ರದೇಶದಲ್ಲಿ 8 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಅಲಿಬಾಗ್‌ನ ಜಿರಾದ್ ಎಂಬ ಪ್ರದೇಶದಲ್ಲಿ ಈ ಭೂಮಿಯನ್ನು ತೆಗೆದುಕೊಳ್ಳಲಾಗಿದ್ದು, ಇಲ್ಲಿ ವಿರಾಟ್ ಕೊಹ್ಲಿ ಐಷಾರಾಮಿ ಫಾರ್ಮ್ ಹೌಸ್ ಸಿದ್ಧಪಡಿಸಲಿದ್ದಾರೆ. ವಿರಾಟ್ ಕೊಹ್ಲಿಗಿಂತ ಮೊದಲು ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಅಜಿತ್ ಅಗರ್ಕರ್, ರೋಹಿತ್ ಶರ್ಮಾ ಕೂಡ ಆಲಿಬಾಗ್‌ನಲ್ಲಿ ಭೂಮಿ ಖರೀದಿಸಿದ್ದಾರೆ.
ಆಲಿಬಾಗ್ ಮುಂಬೈಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಇಲ್ಲಿ ಪ್ರಕೃತಿ ಸೌಂದರ್ಯ ಅದ್ಭುತವಾಗಿದೆ. ಅನೇಕ ಸಿನಿಮಾ ತಾರೆಯರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಇಲ್ಲಿ ಭೂಮಿ ಹೊಂದಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಫಾರ್ಮ್ ಹೌಸ್‌ಗಾಗಿ ಈ ಸ್ಥಳವನ್ನು ತುಂಬಾ ಇಷ್ಟಪಟ್ಟು ಖರೀದಿ ಮಾಡಿದ್ದಾರೆ ಎಂದಯ ವರದಿಯಾಗಿದೆ.
ವಿರಾಟ್ ಕೊಹ್ಲಿ ಸದ್ಯ ದುಬೈನಲ್ಲಿ ಏಷ್ಯಾಕಪ್ ಆಡುತ್ತಿದ್ದಾರೆ. ಆರು ತಿಂಗಳ ಹಿಂದೆ ಈ ಜಮೀನು ನೋಡಿದ್ದ ವಿರುಷ್ಕಾ ಜೋಡಿ ಈಗ ಆ ಜಮೀನು ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಪವರ್ ಆಫ್ ಅಟಾರ್ನಿ ಪಡೆದು ಅವರ ಸಹೋದರ ವಿಕಾಸ್ ಕೊಹ್ಲಿ ಅವರು 19 ಕೋಟಿ 24 ಲಕ್ಷ 50 ಸಾವಿರಕ್ಕೆ ಡೀಲ್ ಪಡೆದು ಮಂಗಳವಾರ 1 ಕೋಟಿ 15 ಲಕ್ಷ 45 ಸಾವಿರ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಭೂಮಿಯನ್ನು ವಿರಾಟ್ ಕೊಹ್ಲಿ ಹೆಸರಿಗೆ ಮಾಡಿಸಿದ್ದಾರೆ. ಈ ಸಂಪೂರ್ಣ ಒಪ್ಪಂದವನ್ನು ಸಮೀರ ಹ್ಯಾಬಿಟಾಟ್ಸ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಮೂಲಕ ಪೂರ್ಣಗೊಳಿಸಲಾಗಿದೆ.