ಮುಂಬೈ: ವಿಶ್ವ ಇಲೆವೆನ್ ವಿರುದ್ಧ ನಡೆಯಲಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಿಂದ ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಹಿಂದೆ ಸರಿದಿದ್ದಾರೆ.
									
			
			 
 			
 
 			
			                     
							
							
			        							
								
																	ಸೆಪ್ಟೆಂಬರ್ 16 ರಂದು ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ಇಯಾನ್ ಮಾರ್ಗನ್ ನೇತೃತ್ವದ ವಿಶ್ವ ಇಲೆವೆನ್ ವಿರುದ್ಧ ಭಾರತದ ದಿಗ್ಗಜ ಕ್ರಿಕೆಟಿಗರನ್ನೊಳಗೊಂಡ ಇಂಡಿಯ ಮಹಾರಾಜಸ್ ತಂಡದ ನಡುವಿನ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಭಾರತ ತಂಡವನ್ನು ಗಂಗೂಲಿ ಮುನ್ನಡೆಸಬೇಕಿತ್ತು.
									
										
								
																	ಆದರೆ ವೈಯಕ್ತಿಕ ಕಾರಣ ನೀಡಿ ಗಂಗೂಲಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಗಂಗೂಲಿ ಇದ್ದಾರೆಂಬ ಕಾರಣಕ್ಕೆ ಅವರ ತವರಿನ ಅಭಿಮಾನಿಗಳು ಮೈದಾನಕ್ಕೆ ಬರಲು ತೀರ್ಮಾನಿಸಿದ್ದರು. ಆದರೆ ಈಗ ಗಂಗೂಲಿಯೇ ಇಲ್ಲದ ಕಾರಣ ಪಂದ್ಯ ಕಳೆಗುಂದಿದೆ.