Publish Date: Fri, 02 Sep 2022 (16:02 IST)
Updated Date: Fri, 02 Sep 2022 (16:04 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಆಡಲು ಅರಬರ ನಾಡಿಗೆ ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರು ಸೂಪರ್ ಫೋರ್ ಹಂತಕ್ಕೆ ಮೊದಲು ಬೀಚ್ ನಲ್ಲಿ ಮಸ್ತಿ ಮಾಡಿದ್ದಾರೆ.
ಭಾನುವಾರ ಸೂಪರ್ ಫೋರ್ ಹಂತದ ಪಂದ್ಯಗಳು ಪ್ರಾರಂಭವಾಗಲಿದ್ದು, ಅದಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಬೀಚ್ ನಲ್ಲಿ ಸರ್ಫಿಂಗ್, ಬೀಚ್ ವಾಲಿಬಾಲ್ ಆಡುತ್ತಾ ರಿಲ್ಯಾಕ್ಸ್ ಆಗಿದ್ದಾರೆ.
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಜೊತೆಯಾಗಿ ಮೋಜು ಮಸ್ತಿ ಮಾಡುವ ಕ್ಷಣಗಳನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇವರಿಗೆ ಕೋಚ್ ದ್ರಾವಿಡ್ ಸೇರಿದಂತೆ ಸಹಾಯಕ ಸಿಬ್ಬಂದಿಗಳೂ ಜೊತೆಯಾಗಿದ್ದಾರೆ.