Publish Date: Thu, 01 Sep 2022 (10:26 IST)
Updated Date: Thu, 01 Sep 2022 (09:28 IST)
ಮುಂಬೈ: ಈಗಾಗಲೇ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಕ್ರಿಕೆಟಿಗರಿಗೆ ನಿಯಮಿತವಾಗಿ ಒಂದೊಂದು ಸರಣಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಇದು ಇನ್ನು, ಕೋಚ್ ಗಳಿಗೂ ಅನ್ವಯಿಸಲಿದೆ.
ಕೆಲವು ಕ್ರಿಕೆಟಿಗರು ಸುದೀರ್ಘ ಮಾದರಿಯ ಕ್ರಿಕೆಟ್ ದೈಹಿಕವಾಗಿ ಹೆಚ್ಚು ಒತ್ತಡವುಂಟು ಮಾಡುತ್ತಿದೆ ಎಂಬ ಕಾರಣಕ್ಕೆ ಕಿರು ಮಾದರಿಯಲ್ಲಿ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಮುಂದೆ ಕೋಚ್ ಗಳೂ ತಮಗೆ ಕಿರು ಮಾದರಿ ಆಥವಾ ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರ ಕೋಚಿಂಗ್ ಮಾಡಲು ಆಸಕ್ತಿಯಿದೆ ಎಂದು ಬೇಡಿಕೆ ಸಲ್ಲಿಸಬಹುದು. ಅಂತಹದ್ದೊಂದು ಸಿಸ್ಟಂ ಬಂದರೆ ಮುಂದೆ ಎಲ್ಲಾ ತಂಡಗಳಿಗೂ ಪ್ರತೀ ಫಾರ್ಮ್ಯಾಟ್ ಗೆ ಒಬ್ಬೊಬ್ಬ ಕೋಚ್ ನೇಮಕವಾಗಬಹುದು.