ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಹಾಂಗ್ ಕಾಂಗ್ ವಿರುದ್ಧ ಪಂದ್ಯವಾಡಲಿದೆ.
ಮೊದಲ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ದುರ್ಬಲ ಎದುರಾಳಿ ಹಾಂಗ್ ಕಾಂಗ್ ನ್ನು ಎದುರಿಸಬೇಕಿದೆ.
ಈ ಪಂದ್ಯದಲ್ಲಿ ಭಾರತ ಮುಂದಿನ ಮಹತ್ವದ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೀ ಆಟಗಾರರಿಗೆ ವಿಶ್ರಾಂತಿ ನೀಡಿದರೂ ಅಚ್ಚರಿಯಿಲ್ಲ. ಟೀಂ ಇಂಡಿಯಾಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಆರಂಭಿಕರಾದ ರೋಹಿತ್-ಕೆಎಲ್ ರಾಹುಲ್ ಸಿಡಿಯಬೇಕಾದ ಅನಿವಾರ್ಯತೆಯಿದೆ. ದುರ್ಬಲ ಎದುರಾಳಿಗಳ ಎದುರು ಈ ಇಬ್ಬರು ಮತ್ತೆ ಲಯ ಕಂಡುಕೊಳ್ಳಬಹುದು ಎಂಬ ವಿಶ್ವಾಸವಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.