Publish Date: Thu, 01 Sep 2022 (16:10 IST)
Updated Date: Thu, 01 Sep 2022 (16:12 IST)
ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ಮತ್ತೆ ಆರಂಭವಾಗುತ್ತಿದೆ. ಭಾರತ ತಂಡದ ಪರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕಣಕ್ಕಿಳಿಯುತ್ತಿದ್ದಾರೆ.
ಈ ಹಿಂದೆ ರೋಡ್ ಸೇಫ್ಟೀ ಟೂರ್ನಮೆಂಟ್ ನಡೆದಿತ್ತು. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸುವ ಕ್ರಿಕೆಟ್ ಟೂರ್ನಮೆಂಟ್ ಇದಾಗಿದ್ದು, ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 1 ರವರೆಗೆ ಕಾನ್ಪುರ, ರಾಯ್ಪುರ, ಇಂಧೋರ್, ಡೆಹ್ರಾಡೂನ್ ನಲ್ಲಿ ಪಂದ್ಯಗಳು ನಡೆಯಲಿವೆ.
ಭಾರತವಲ್ಲದೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ದ.ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳೂ ಕಣದಲ್ಲಿವೆ. ಭಾರತ ತಂಡದಲ್ಲಿ ಸಚಿನ್ ಜೊತೆಗೆ ವೀರೇಂದ್ರ ಸೆಹ್ವಾಗ್, ಹೇಮಾಂಗ್ ಬದಾನಿ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ ಮುಂತಾದವರೂ ತಂಡದಲ್ಲಿರುತ್ತಾರೆ. ಸಚಿನ್-ಸೆಹ್ವಾಗ್ ರ ಆರಂಭಿಕ ಜೋಡಿಯನ್ನು ನೋಡಲೆಂದೇ ಜನ ಮೈದಾನಕ್ಕೆ ಆಗಮಿಸುತ್ತಾರೆ.