Publish Date: Sun, 11 Sep 2022 (08:20 IST)
Updated Date: Sun, 11 Sep 2022 (08:59 IST)
ದುಬೈ: ಏಷ್ಯಾ ಕಪ್ ಕೂಟದ ಫೈನಲ್ ಪಂದ್ಯ ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ.
ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಸೋತಿತ್ತು. ಹಾಗಿದ್ದರೂ ಕಳೆದ ಎರಡು ಪಂದ್ಯಗಳನ್ನು ಗೆದ್ದಿರುವುದರಿಂದ ಪಾಕಿಸ್ತಾನ ಫೈನಲ್ ಗೇರಿತು.
ಇದೀಗ ಫೈನಲ್ ನಲ್ಲಿ ಲಂಕಾ ವಿರುದ್ಧ ಪಾಕ್ ಸೆಣಸಲಿದೆ. ಈ ಟೂರ್ನಿಯಲ್ಲಿ ಶ್ರೀಲಂಕಾ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಅದೃಷ್ಟವಶಾತ್ ಲಂಕಾ ಸೂಪರ್ ಫೋರ್ ಹಂತದ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇದೂ ಕೂಡಾ ಲಂಕಾಗೆ ಪ್ಲಸ್ ಪಾಯಿಂಟ್ ಆಗಿತ್ತು. ಇದೀಗ ಪಾಕಿಸ್ತಾನಕ್ಕೆ ಫೈನಲ್ ನಲ್ಲಿ ಲಂಕಾ ಕಠಿಣ ಪೈಪೋಟಿಯೊಡ್ಡಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.