Select Your Language

Notifications

webdunia
webdunia
webdunia
webdunia

ಕೊಹ್ಲಿ ಕಮ್ ಬ್ಯಾಕ್ ಜರ್ನಿಯೇ ಅದ್ಭುತ! ಶತಕದ ಹಿಂದಿನ ಶ್ರಮವೇನಿತ್ತು?

ಕೊಹ್ಲಿ ಕಮ್ ಬ್ಯಾಕ್ ಜರ್ನಿಯೇ ಅದ್ಭುತ! ಶತಕದ ಹಿಂದಿನ ಶ್ರಮವೇನಿತ್ತು?
ಮುಂಬೈ , ಭಾನುವಾರ, 11 ಸೆಪ್ಟಂಬರ್ 2022 (08:40 IST)
ಮುಂಬೈ: ಈ ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಕಪ್ ಗೆಲ್ಲಲಾಗದಿದ್ದರೂ ವಿರಾಟ್ ಕೊಹ್ಲಿ ಫಾರ್ಮ್ ಗೆ ಬಂದಿದ್ದು ಪ್ಲಸ್ ಪಾಯಿಂಟ್ ಆಯಿತು.

ಸತತ ಮೂರು ವರ್ಷಗಳಿಂದ ರನ್ ಬರಗಾಲ ಎದುರಿಸುತ್ತಿದ್ದ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಗಳಿಸಿ ಮೂರು ವರ್ಷಗಳ ವನವಾಸ ಅಂತ್ಯಗೊಳಿಸಿದ್ದರು. ಈ ಯಶಸ್ಸಿಗೆ ತಮ್ಮ ಪರಿಶ್ರಮವೇನಿತ್ತು ಎಂಬುದನ್ನು ಕೊಹ್ಲಿ ಹೇಳಿಕೊಂಡಿದ್ದಾರೆ.

‘ಈ ಏಷ್ಯಾ ಕಪ್ ನಲ್ಲಿ ನಾನು ನನ್ನಲ್ಲಿ ಸಕಾರಾತ್ಮಕತೆ ನೋಡಿದೆ. ನನ್ನ ಕಷ್ಟದ ದಿನಗಳಲ್ಲಿ ಸದಾ ನನಗೆ ಪತ್ನಿ ಅನುಷ್ಕಾ ಸಕಾರಾತ್ಮಕವಾಗಿರುವಂತೆ ನೋಡಿಕೊಂಡಿದ್ದಳು. ನಾನು 60 ರ ಆಸುಪಾಸಿನಲ್ಲಿ ಔಟಾಗುತ್ತಿದ್ದೆ. ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದೇನೆ ಎನಿಸಿದರೂ ಸಾಕಾಗುತ್ತಿರಲಿಲ್ಲ. ನಾನು ಇದಕ್ಕೆ ಯಾರನ್ನೂ ಹೊಣೆ ಮಾಡಲ್ಲ. ದೇವರು ನನಗೆ ಹಿಂದೆ ಸಾಕಷ್ಟು ಯಶಸ್ಸು ಕೊಟ್ಟಿದ್ದಾನೆ. ಅದೇ ಕಾರಣಕ್ಕೆ ನನ್ನ ಬಗ್ಗೆ ಎಲ್ಲರೂ ಮಾತನಾಡುವ ಸ್ಥಾನದಲ್ಲಿ ನಾನಿದ್ದೇನೆ ಎಂದು ನಂಬಿದ್ದೆ.

ದೇವರು ನಮಗೆ ಎಲ್ಲವನ್ನೂ ಕೊಡುತ್ತಾನೆ. ಆದರೆ ಅದಕ್ಕೆ ನಾವು ಅಷ್ಟೇ ಪರಿಶ್ರಮಪಡಬೇಕಾಗುತ್ತದೆ. ಹೀಗಾಗಿ ನಾನು ಮತ್ತೆ ನನ್ನ ಹಿಂದಿನ ದಿನಗಳನ್ನು ಮೆಲುಕು ಹಾಕಿದೆ. ನನ್ನ ಹಳೆಯ ಉತ್ತಮ ಇನಿಂಗ್ಸ್ ಗಳ ವಿಡಿಯೋ ನೋಡುತ್ತಿದ್ದೆ. ಹಲವರು ನಾನು ಆ ತಪ್ಪು ಮಾಡುತ್ತೇನೆ, ಈ ತಪ್ಪು ಮಾಡುತ್ತೇ ಎಂದು ಹೇಳುತ್ತಿದ್ದರು. ಆದರೆ ನನ್ನ ಹಳೆಯ ವಿಡಿಯೋಗಳನ್ನು ನೋಡಿದಾಗ ನನಗೆ ಆಗಲೂ ಈಗಲೂ ಏನು ವ್ಯತ್ಯಾಸವಿದೆ ಎಂದು ಅನಿಸುತ್ತಿರಲಿಲ್ಲ. ಹೀಗಾಗಿ ನನ್ನ ಬ್ಯಾಟಿಂಗ್ ನಲ್ಲಿ ದೋಷವಿಲ್ಲ ಎಂದು ಮನವರಿಕೆ ಮಾಡಿಕೊಂಡೆ. ಆದರೆ ನನಗೆ ಏನಾಗುತ್ತಿದೆ ಎಂದು ನಾನು ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದ್ದೆ.  ಕೊನೆಗೆ ಜನ ಏನೇ ಮಾತಾಡಿಕೊಳ್ಳಬಹುದು, ಆದರೆ ನಮ್ಮ ಬಗ್ಗೆ ನಮಗೆ ಮಾತ್ರ ಗೊತ್ತು ಎನ್ನುವುದನ್ನು ಅರ್ಥ ಮಾಡಿಕೊಂಡೆ. ಕಳೆದ ಒಂದು ತಿಂಗಳ ಬ್ರೇಕ್ ನನ್ನ ಪಾಲಿಗೆ ಉಪಯುಕ್ತವಾಗಿತ್ತು’ ಎಂದು ಕೊಹ್ಲಿ ಯಶಸ್ಸಿನ ಗುಟ್ಟು ವಿವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಆಯ್ಕೆ ಸೆಪ್ಟೆಂಬರ್ 16 ಕ್ಕೆ?