Select Your Language

Notifications

webdunia
webdunia
webdunia
webdunia

Viral video: ಬಾಲ್ ಹಿಡ್ಕೊಂಡು ಸಾಯಿ ಸುದರ್ಶನ್ ಮಾಟ ಮಂತ್ರ ಮಾಡ್ತಿದ್ದಾರಾ

Sai Sudarshan

Krishnaveni K

ಲೀಡ್ಸ್ , ಸೋಮವಾರ, 23 ಜೂನ್ 2025 (13:38 IST)
Photo Credit: X
ಲೀಡ್ಸ್: ಟೀಂ ಇಂಡಿಯಾಯುವ ಬ್ಯಾಟಿಗ ಸಾಯಿ ಸುದರ್ಶನ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಬ್ಯಾಟಿಂಗ್ ಗೆ ತೆರಳುವ ಮುನ್ನ ಬಾಲ್ ಹಿಡ್ಕೊಂಡು ಏನೋ ಮಾಡುತ್ತಿದ್ದುದನ್ನು ನೋಡಿ ನೆಟ್ಟಿಗರು ಏನು ಮಾಟ ಮಂತ್ರ ಮಾಡ್ತಾವ್ರಾ ಎಂದು ಕಾಲೆಳೆದಿದ್ದಾರೆ.

ಈ ಬಾರಿ ಐಪಿಎಲ್ ನಲ್ಲಿ ಗರಿಷ್ಠ ರನ್ ಸರದಾರನಾಗಿದ್ದ ಸಾಯಿ ಸುದರ್ಶನ್ ಗೆ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿತ್ತು. ಇದೀದ ಲೀಡ್ಸ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂಲಕ ಅವರು ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿದ್ದಾರೆ.

ಆದರೆ ಮೊದಲ ಇನಿಂಗ್ಸ್ ನಲ್ಲಿ ಅವರು ಡಕ್ ಔಟ್ ಆಗಿದ್ದರು. ಎರಡನೇ ಇನಿಂಗ್ಸ್ ನಲ್ಲಿ ಮಹತ್ವದ 30 ರನ್ ಗಳಿಸಿದ್ದರು. ಈ ಇನಿಂಗ್ಸ್ ಗೆ ಮೊದಲು ಅವರು ಹೆಲ್ಮೆಟ್, ಪ್ಯಾಡ್ ಕಟ್ಟಿಕೊಂಡು ಡಗೌಟ್ ನಲ್ಲಿ ಬಾಲ್ ಒಂದನ್ನು ಕೈಯಲ್ಲಿ ಹಿಡಿದುಕೊಂಡು ಒಮ್ಮೆ ಕಣ್ಣೆದುರು ತಂದು ನಂತರ ಕೆಳಗೆ ಹಾಕಿ ಏಕಾಗ್ರತೆ ಸಾಧಿಸಲು ಪ್ರಯತ್ನ ಪಡುತ್ತಿದ್ದರು.  ಬಳಿಕ ಕೈಯಿಂದ ನಾಲ್ಕು ಗೆರೆ ಎಳೆದು ವಿಚಿತ್ರವಾಗಿ ವರ್ತಿಸಿದ್ದರು. ಅವರ ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಸಖತ್ ಕಾಲೆಳೆದಿದ್ದಾರೆ. ಏನು ಬ್ಯಾಟಿಂಗ್ ಗೆ ಮೊದಲು ಮಂತ್ರ ಮಾಡ್ತಿದ್ದರಾ ಎಂದು ಕೆಲವರು  ಹೇಳಿದರೆ ಮತ್ತೆ ಕೆಲವರು ಅಭಿಷೇಕ್ ಶರ್ಮಾರನ್ನು ಕಾಪಿ ಮಾಡ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ