Publish Date: Sat, 21 Jun 2025 (21:13 IST)
Updated Date: Sat, 21 Jun 2025 (21:17 IST)
ಲೀಡ್ಸ್: ರಿಷಭ್ ಪಂತ್ ರನ್ನು ಅಂದು ಸ್ಟುಪಿಡ್ ಎಂದಿದ್ದ ಸುನಿಲ್ ಗವಾಸ್ಕರ್ ಇಂದು ಶತಕ ಸಿಡಿಸಿದ್ದನ್ನು ನೋಡಿ ಹೇಳಿದ್ದೇನು? ಅಂದು ತೆಗಳಿಸಿಕೊಂಡಿದ್ದವರಿಂದಲೇ ಇಂದು ರಿಷಭ್ ಹೊಗಳಿಸಿಕೊಂಡಿದ್ದು ವಿಡಿಯೋ ವೈರಲ್ ಆಗಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ದಯನೀಯವಾಗಿತ್ತು. ಆದರೆ ಆಗಲೂ ರಿಷಭ್ ಪರಿಸ್ಥಿತಿಗೆ ತಕ್ಕಂತೆ ಆಡದೇ ಸುಲಭ ತಪ್ಪು ಮಾಡಿ ಔಟಾಗುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಸುನಿಲ್ ಗವಾಸ್ಕರ್ ಕಾಮೆಂಟರಿ ಮಾಡುವಾಗಲೇ ಸ್ಟುಪಿಡ್ ಸ್ಟುಪಿಡ್ ಸ್ಟುಪಿಡ್ ಎಂದು ಬೈದಿದ್ದರು. ಅವರ ಈ ಕಾಮೆಂಟ್ ವೈರಲ್ ಆಗಿತ್ತು.
ಇದೀಗ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಜವಾಬ್ಧಾರಿಯುತವಾಗಿ ಆಡಿ ಶತಕ ಸಿಡಿಸಿದ್ದಾರೆ. ಸಿಕ್ಸರ್ ಮೂಲಕ ರಿಷಭ್ ಶತಕ ಸಿಡಿಸುತ್ತಿದ್ದಂತೇ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಸೂಪರ್ಬ್ ಸೂಪರ್ಬ್ ಸೂಪರ್ಬ್ ಎಂದು ಹೊಗಳಿದ್ದಾರೆ. ಅಂದು ತೆಗಳಿದ್ದ ಅದೇ ಸುನಿಲ್ ಗವಾಸ್ಕರ್ ಇಂದು ಹೊಗಳಿದ್ದು ವಿಶೇಷವಾಗಿತ್ತು.
ಭಾರತ ಇಂದು ಮೊದಲ ಇನಿಂಗ್ಸ್ ನಲ್ಲಿ 471 ರನ್ ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿ ಸುಸ್ಥಿತಿಯಲ್ಲಿದೆ.