Publish Date: Sat, 21 Jun 2025 (09:54 IST)
Updated Date: Sat, 21 Jun 2025 (09:59 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ರಿಷಭ್ ಪಂತ್ ನಾಟೌಟ್ ಆಗಿ ಪೆವಿಲಿಯನ್ ಗೆ ಮರಳಿದಾಗ ಕೆಎಲ್ ರಾಹುಲ್ ನಡೆದುಕೊಂಡ ಫನ್ನಿ ವಿಡಿಯೋ ಈಗ ವೈರಲ್ ಆಗಿದೆ.
ಮೊದಲ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿ ದಿನದಾಟ ಮುಗಿಸಿತ್ತು. ನಿನ್ನೆಯ ದಿನ ಭಾರತದ ಪರ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಬ್ಮನ್ ಗಿಲ್ ಶತಕ ಸಿಡಿಸಿದರು. ಜೈಸ್ವಾಲ್ 101 ರನ್ ಗಳಿಸಿದರೆ ಗಿಲ್ 127 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೆಎಲ್ ರಾಹುಲ್ 42 ಮತ್ತು ಸಾಯಿ ಸುದರ್ಶನ್ ಶೂನ್ಯಕ್ಕೆ ಔಟಾಗಿದ್ದರು.
ನಿನ್ನೆ ರಿಷಭ್ ಪಂತ್ ಎಂದಿನಂತೆ ಅಸಂಪ್ರದಾಯಿಕ ಹೊಡೆತಗಳ ಮೂಲಕ ರಂಜಿಸಿದರು. ಅವರು ನಿನ್ನೆ 65 ರನ್ ಗಳಿಸಿ ಅಜೇಯರಾಗುಳಿದು ಪೆವಿಲಿಯನ್ ಗೆ ಮರಳುವಾಗ ಬಾಗಿಲಲ್ಲೇ ನಿಂತಿದ್ದ ಕೆಎಲ್ ರಾಹುಲ್ ಕೈ ಕುಲುಕುವ ಮೊದಲು ಅಣ್ಣೋ.. ನಮಸ್ಕಾರ ಎಂಬಂತೆ ಕೈ ಮುಗಿದು ತಮಾಷೆಯಾಗಿ ಸ್ವಾಗತಿಸಿದ್ದಾರೆ.
ಸಾಮಾನ್ಯವಾಗಿ ಕೆಎಲ್ ರಾಹುಲ್ ತೀರಾ ಗಂಭೀರ ಸ್ವಭಾವದವರು. ಆದರೆ ರಿಷಭ್ ಜೊತೆ ಅವರು ಮಾಡಿದ ತಮಾಷೆಯ ಸ್ವಾಗತ ನೆಟ್ಟಿಗರು ಗಮನ ಸೆಳೆದಿದೆ. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.