Select Your Language

Notifications

webdunia
webdunia
webdunia
webdunia

ಆಂಡರ್ಸನ್ ತೆಂಡುಲ್ಕರ್ ಟ್ರೋಫಿಯಲ್ಲಿದೆ ಒಂದು ವಿಶೇಷತೆ ಏನದು ನೋಡಿ

Anderson Tendulkar trophy

Krishnaveni K

ಲೀಡ್ಸ್ , ಶುಕ್ರವಾರ, 20 ಜೂನ್ 2025 (09:52 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ತೆಂಡುಲ್ಕರ್ ಆಂಡರ್ಸನ್ ಟ್ರೋಫಿ ಎಂದು ಹೆಸರಿಡಲಾಗಿದೆ. ಈ ಟ್ರೋಫಿಯ ವಿಶೇಷತೆ ಏನು ಇಲ್ಲಿದೆ ವಿವರ.

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ಇಂಗ್ಲೆಂಡ್ ದಿಗ್ಗಜ ಬೌಲರ್ ಜೇಮ್ಸ್ ಆಂಡರ್ಸನ್ ಗೌರವಾರ್ಥ ಟ್ರೋಫಿಗೆ ಇವರಿಬ್ಬರ ಹೆಸರಿಡಲಾಗಿದೆ. ನಿನ್ನೆ ಈ ಇಬ್ಬರು ದಿಗ್ಗಜರೇ ಟ್ರೋಫಿ ಅನಾವರಣಗೊಳಿಸಿದರು. ಈ ಟ್ರೋಫಿಯಲ್ಲಿ ವಿಶೇಷತೆಯೊಂದಿದೆ.

ಕೇವಲ ಟ್ರೋಫಿಗೆ ಇವರ ಹೆಸರು ಮಾತ್ರವಲ್ಲ, ಇಬ್ಬರು ದಿಗ್ಗಜರ ಸಾಧನೆಗಳನ್ನು ಸೂಚಿಸುವ ಚಿಹ್ನೆಗಳು ಇದರಲ್ಲಿದೆ. ಟ್ರೋಫಿಯ ಮೇಲ್ಭಾಗದಲ್ಲಿ ಆಂಡರ್ಸನ್ ಮತ್ತು ಸಚಿನ್ ಹೆಸರಿನ ಮೊದಲ ಅಕ್ಷರವನ್ನು ಕೆತ್ತಲಾಗಿದೆ. ಬ್ಯಾಟ್ ಮತ್ತು ಬಾಲ್ ನ ಚಿಹ್ನೆ ಕೆತ್ತಲಾಗಿದೆ. ಮಧ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ಎಂದು ಬರೆಯಲಾಗಿದೆ.

ಟ್ರೋಫಿಯ ಕೆಳ ಭಾಗದಲ್ಲಿ ತೆಂಡುಲ್ಕರ್ ಬ್ಯಾಟಿಂಗ್ ಮಾಡುವ ಮತ್ತು ಆಂಡರ್ಸನ್ ಬೌಲಿಂಗ್ ಮಾಡುವ ಚಿತ್ರವನ್ನು ಕೆತ್ತಲಾಗಿದೆ. ಈ ಮೂಲಕ ಈ ಸರಣಿಗೆ ಇಬ್ಬರು ದಿಗ್ಗಜರ ಹೆಸರಿಟ್ಟಿದ್ದು ಮಾತ್ರವಲ್ಲ, ಟ್ರೋಫಿಯನ್ನು ವಿಶೇಷವಾಗಿ ವಿನ್ಯಾಸ ಮಾಡಿ ಗೌರವ ಸೂಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG Test: ರೋಕೊ ಇಲ್ಲದ ಟೀಂ ಇಂಡಿಯಾಗೆ ರೂಟ್ ಕಿತ್ತೆಸೆಯುವುದೇ ದೊಡ್ಡ ಸವಾಲು