Select Your Language

Notifications

webdunia
webdunia
webdunia
webdunia

IND vs ENG test: ಭಾರತ, ಇಂಗ್ಲೆಂಡ್ ಟೆಸ್ಟ್ ಸರಣಿಯ ಲೈವ್ ವೀಕ್ಷಣೆ ಎಲ್ಲಿ, ಟೈಂ ವಿವರ ಇಲ್ಲಿದೆ

Shubman Gill

Krishnaveni K

ಲೀಡ್ಸ್ , ಗುರುವಾರ, 19 ಜೂನ್ 2025 (16:52 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಳೆಯಿಂದ ಲೀಡ್ಸ್ ನಡುವೆ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯಗಳನ್ನು ಲೈವ್ ಆಗಿ ಎಲ್ಲಿ ವೀಕ್ಷಿಸಬೇಕು ಮತ್ತು ಎಷ್ಟು ಗಂಟೆಗೆ ಪಂದ್ಯ ಆರಂಭವಾಗಲಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಐಪಿಎಲ್ ಹಬ್ಬ ಮುಗಿದು ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಟೆಸ್ಟ್ ಕ್ರಿಕೆಟ್ ನ ರಸದೌತಣ ಸವಿಯಲು ಸಿದ್ಧರಾಗಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರಿಲ್ಲದಿದ್ದರೂ ಯುವ ಆಟಗಾರರು ಇಂಗ್ಲೆಂಡ್ ತಂಡವನ್ನು ಮಣಿಸುವಷ್ಟು ಸಮರ್ಥರೇ ಆಗಿದ್ದಾರೆ. ಹೀಗಾಗಿ ಭಾರತ ತಂಡದ ಮೇಲೆ ಅಭಿಮಾನಗಳಿಗೆ ಅಪಾರ ನಿರೀಕ್ಷೆಯಿದೆ.

ಮೊದಲ ಟೆಸ್ಟ್ ಪಂದ್ಯ ಇಂಗ್ಲೆಂಡ್ ನ ಲೀಡ್ಸ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಎಲ್ಲಾ ಟೆಸ್ಟ್ ಪಂದ್ಯಗಳೂ ಅಪರಾಹ್ನ 3.30 ಕ್ಕೆ ಆರಂಭವಾಗುತ್ತದೆ. ಹಾಗೆಯೇ ನಾಳೆಯ ಪಂದ್ಯವೂ 3.30 ಕ್ಕೆ ಆರಂಭವಾಗಲಿದೆ.  ಪಂದ್ಯಗಳ ನೇರ ಪ್ರಸಾರವನ್ನು ಟಿವಿಯಲ್ಲಿ ವೀಕ್ಷಿಸುವುದಾದರೆ ಸೋನಿ ನೆಟ್ ವರ್ಕ್ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಇನ್ನು ಆಪ್ ನಲ್ಲಿ ವೀಕ್ಷಣೆ ಮಾಡುವವರು ಜಿಯೋ ಆಪ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಆದರೆ ಹವಾಮಾನ ಮಾತ್ರ ಆತಂಕ ಮೂಡಿಸುವಂತಿದೆ. ಹೆಡಿಂಗ್ಲೆಯಲ್ಲಿ ನಾಳೆ ಮೋಡ ಕವಿದ ವಾತಾವರಣವಿರಲಿದೆ. ಆದರೆ ಶನಿವಾರ ಮತ್ತು ಭಾನುವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಹೀಗಾದಲ್ಲಿ ಪಂದ್ಯ ಸಂಪೂರ್ಣವಾಗಿ ನಡೆಯುವುದು ಅನುಮಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಸ್ಪ್ರೀತ್ ಬುಮ್ರಾಗೆಲ್ಲಾ ನಾವು ಹೆದರಲ್ಲ ಎಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್