Select Your Language

Notifications

webdunia
webdunia
webdunia
webdunia

Virat Kohli: ಲಂಡನ್ ನಲ್ಲಿ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿಯಿಂದ ಸ್ಪೆಷಲ್ ಸರ್ಪೈಸ್

Virat Kohli

Krishnaveni K

ಲಂಡನ್ , ಮಂಗಳವಾರ, 17 ಜೂನ್ 2025 (18:07 IST)
ಲಂಡನ್: ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಗೆ ತೆರಳಿರುವ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿಯಿಂದ ಸರ್ಪೈಸ್ ಸಿಕ್ಕಿದೆ ಎನ್ನಲಾಗಿದೆ. ಅದೇನದು ಎಂದು ತಿಳಿಯಲು ಈ ಸ್ಟೋರಿ ನೋಡಿ.

ಎಲ್ಲರಿಗೂ ಗೊತ್ತಿರುವ ಹಾಗೆ ವಿರಾಟ್ ಕೊಹ್ಲಿ ಇತ್ತೀಚೆಗೆ ಭಾರತದಲ್ಲಿ ಇರುವುದಕ್ಕಿಂತ ಲಂಡನ್ ನಲ್ಲಿಯೇ ಇರುತ್ತಾರೆ. ಲಂಡನ್ ನಲ್ಲಿ ಕೊಹ್ಲಿ ತಮ್ಮದೇ ಮನೆಯನ್ನೂ ಹೊಂದಿದ್ದಾರೆ. ಸದ್ಯಕ್ಕೆ ಟೆಸ್ಟ್, ಟಿ20 ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಕೊಹ್ಲಿ ತಮ್ಮ ಪತ್ನಿ, ಮಕ್ಕಳೊಂದಿಗೆ ಲಂಡನ್ ನ ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಈ ನಡುವೆ ಕೊಹ್ಲಿ ಲಂಡನ್ ನ ತಮ್ಮ ಮನೆಗೆ ಟೀಂ ಇಂಡಿಯಾದ ತಮ್ಮ ಆಪ್ತ ಕ್ರಿಕೆಟಿಗರನ್ನು ಆಹ್ವಾನಿಸಿ ಆತಿಥ್ಯ ನೀಡಿದ್ದಾರೆ ಎಂದು ವರದಿಯಾಗಿದೆ. ನೂತನ ನಾಯಕ ಶುಬ್ಮನ್ ಗಿಲ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್ ಸೇರಿದಂತೆ ಕೊಹ್ಲಿ ಆಪ್ತ ವಲಯದ ಕೆಲವೇ ಕ್ರಿಕೆಟಿಗರನ್ನು ಆಹ್ವಾನಿಸಲಾಗಿತ್ತು ಎನ್ನಲಾಗಿದೆ.

ಇನ್ನೊಂದು ಮೂಲಗಳ ಪ್ರಕಾರ ಕೊಹ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ವೇಳೆ ಮೈದಾನಕ್ಕೆ ಬಂದು ಆಟಗಾರರನ್ನು ಚಿಯರ್ ಅಪ್ ಮಾಡಲಿದ್ದಾರಂತೆ. ಮೊದಲ ಎರಡು ಪಂದ್ಯಗಳಿಗೆ ಕೊಹ್ಲಿ ಮೈದಾನಕ್ಕೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕೊಹ್ಲಿ ಮೈದಾನಕ್ಕೆ ಬಂದರೆ ಅದು ನಿಜಕ್ಕೂ ಆಟಗಾರರಿಗೆ ಸ್ಪೂರ್ತಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ