Select Your Language

Notifications

webdunia
webdunia
webdunia
webdunia

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

KL Rahul

Krishnaveni K

ಲಂಡನ್ , ಗುರುವಾರ, 12 ಜೂನ್ 2025 (09:32 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಟೀಂ ಇಂಡಿಯಾದಲ್ಲಿ ಈ ಬಾರಿ ಕುಚಿಕು ಗೆಳೆಯರಾದ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಇದ್ದಾರೆ. ಇದೀಗ ಆಂಗ್ಲರ ನೆಲದಲ್ಲಿ ಗೆಳೆಯನಿಂದಲೇ ಕೆಎಲ್ ರಾಹುಲ್ ಗೆ ಕುತ್ತು ಬರಲಿದೆಯಾ ಎಂಬ ಅನುಮಾನ ಶುರುವಾಗಿದೆ.

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈಗ ಯುವ ಆಟಗಾರರದ್ದೇ ದರ್ಬಾರ್. ಕೊಹ್ಲಿ-ರೋಹಿತ್ ನಿವೃತ್ತಿ ಬಳಿಕ ತಂಡಕ್ಕೆ ಹೊಸ ಆಟಗಾರರ ಆಗಮನವಾಗಿದೆ. ಶುಬ್ಮನ್ ಗಿಲ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾಗೆ ಓಪನರ್ ಗಳಾಗಿ ಯಾರು ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ತಂಡದಲ್ಲಿ ಓಪನರ್ ಆಗಿ ಅನುಭವ ಇರುವ ಕೆಎಲ್ ರಾಹುಲ್, ಅಭಿಮನ್ಯು ಈಶ್ವರನ್, ಶುಬ್ಮನ್ ಗಿಲ್, ಕರುಣ್ ನಾಯರ್, ಯಶಸ್ವಿ ಜೈಸ್ವಾಲ್ ಇದ್ದಾರೆ. ರೋಹಿತ್ ಶರ್ಮಾ ನಿವೃತ್ತಿ ಬಳಿಕ ಜೈಸ್ವಾಲ್ ಜೊತೆ ಓಪನರ್ ಆಗಿ ಕಣಕ್ಕಿಳಿಯಲು ತಂಡ ಓರ್ವ ಆಟಗಾರನನ್ನು ಆಯ್ಕೆ ಮಾಡಬೇಕಿದೆ.

ಇವರಲ್ಲಿ ಕೆಎಲ್ ರಾಹುಲ್ ಗೆ ಓಪನಿಂಗ್ ಸ್ಥಾನದ ಮೇಲೆ ಕಣ್ಣಿದೆ. ಯಾಕೆಂದರೆ ರಾಹುಲ್ ಓಪನರ್ ಆಗಿದ್ದಾಗಲೆಲ್ಲಾ ಭರ್ಜರಿ ರನ್ ಗಳಿಸಿದ್ದಾರೆ. ಆದರೆ ಅವರಿಗೆ ಕರುಣ್ ನಾಯರ್ ನಿಂದಲೇ ಪೈಪೋಟಿ ಎದುರಾಗಿದೆ.

ಕರುಣ್ ಹಲವು ದಿನಗಳ ನಂತರ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ದೇಶೀಯ ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ, ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಅಭ್ಯಾಸ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ಅವರನ್ನು ಓಪನರ್ ಆಗಿ ಕಣಕ್ಕಿಳಿಸಿದರೆ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಾಗುತ್ತದೆ. ಒಂದು ವೇಳೆ ಕರುಣ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಮಾತ್ರ ರಾಹುಲ್ ಗೆ ತಮ್ಮಿಷ್ಟದ ಓಪನರ್ ಸ್ಥಾನ ಸಿಗಲಿದೆ. ಸದ್ಯಕ್ಕೆ ಎಲ್ಲವೂ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಕೈಯಲ್ಲಿ ನಿರ್ಧಾರವಿದೆ.


Share this Story:

Follow Webdunia kannada

ಮುಂದಿನ ಸುದ್ದಿ

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ