Publish Date: Thu, 19 Jun 2025 (12:12 IST)
Updated Date: Thu, 19 Jun 2025 (12:14 IST)
ಲೀಡ್ಸ್: ಭಾರತದ ವಿರುದ್ಧ ಟೆಸ್ಟ್ ಸರಣಿಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನಾವು ಜಸ್ಪ್ರೀತ್ ಬುಮ್ರಾಗೆಲ್ಲಾ ಹೆದರಲ್ಲ ಎಂದು ಟೀಂ ಇಂಡಿಯಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ರೋಹಿತ್ ಶರ್ಮಾ ನಿವೃತ್ತಿಯಾದ ಬಳಿಕ ಶುಬ್ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ವಿಶ್ವದ ಯಾವುದೇ ತಂಡಕ್ಕೂ ಈಗ ಬುಮ್ರಾರದ್ದೇ ಭಯ. ಯಾಕೆಂದರೆ ಟೀಂ ಇಂಡಿಯಾದ ವಿಶ್ವದರ್ಜೆಯ ಬೌಲರ್ ಎದುರಾಳಿಗಳನ್ನು ಅಷ್ಟರಮಟ್ಟಿಗೆ ನಿದ್ರೆಗೆಡಿಸುತ್ತಾರೆ.
ಆದರೆ ಇಂಗ್ಲೆಂಡ್ ನಾಯಕ ನಮಗೆ ಬುಮ್ರಾ ಭಯವಿಲ್ಲ ಎಂದಿದ್ದಾರೆ. ನಾವು ವಿಶ್ವದರ್ಜೆಯ ತಂಡದ ಎದುರು ಆಡಿದ್ದೇವೆ. ನಮಗೆ ಬುಮ್ರಾ ಕ್ಲಾಸ್, ಎಂತಹ ಬೌಲರ್ ಮತ್ತು ಏನು ಮಾಡಬಲ್ಲರು ಎಂದು ಅರಿವಿದೆ. ಹಾಗಂತ ಅವರಿಗೆ ಭಯವಿಲ್ಲ ಎಂದಿದ್ದಾರೆ.
ಒಬ್ಬ ಬೌಲರ್ ನಿಂದ ಪಂದ್ಯ ಗೆಲ್ಲಲಾಗದು. ಎಲ್ಲಾ 11 ಆಟಗಾರರು ಆಡಿದರೆ ಮಾತ್ರ ಪಂದ್ಯವನ್ನು ಗೆಲ್ಲಬಹುದು. ಇಂಗ್ಲೆಂಡ್ ಅಥವಾ ಇಂಡಿಯಾ ಯಾವುದೇ ತಂಡಕ್ಕೂ ಒಬ್ಬನೇ ಆಟಗಾರನ ಸಹಾಯದಿಂದ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.