Select Your Language

Notifications

webdunia
webdunia
webdunia
webdunia

ನಿಮ್ಮ ವಿಕೆಟ್ ಏನು ಕೊಹ್ಲಿಗೆ ಡೆಡಿಕೇಷನ್ನಾ ಅಂತ ಕೆಎಲ್ ರಾಹುಲ್ ಟ್ರೋಲ್ ಆಗಿದ್ದೇಕೆ

KL Rahul
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಔಟಾದ ಶೈಲಿಗೆ ಟ್ರೋಲ್ ಆಗಿದ್ದಾರೆ. ನಿಮ್ಮದೇನು ವಿರಾಟ್ ಕೊಹ್ಲಿಗೆ ಡೆಡಿಕೇಷನ್ನಾ ಎಂದಿದ್ದಾರೆ.

ನಿನ್ನೆ ಮೊದಲ ದಿನದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟ ಟೀಂ ಇಂಡಿಯಾಗೆ ಕೆಎಲ್ ರಾಹುಲ್-ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ನೀಡಿದರು. ರಾಹುಲ್ ನಿನ್ನೆ ಉತ್ತಮ ಲಯದಲ್ಲಿದ್ದರು. ತಾಳ್ಮೆಯಿಂದ ಮೊದಲ ಅವಧಿಯನ್ನು ನಿಭಾಯಿಸಿದರು.

ಅವರ ಆಟ ಗಮನಿಸಿದರೆ ನಿನ್ನೆ ಒಂದು ಶತಕವನ್ನೇ ಜಮಾಯಿಸಿಬಿಡುತ್ತಾರೇನೋ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದೇನಾಯ್ತೋ 42 ರನ್ ಗಳಿಸಿದ್ದಾಗ ಆಫ್ ಸ್ಟಂಪ್ ಆಚೆ ಹೋಗುತ್ತಿದ್ದ ಬಾಲ್ ಗೆ ಬ್ಯಾಟ್ ತಾಗಿಸಲು ಹೋಗಿ ಕ್ಯಾಚಿತ್ತು ನಿರ್ಗಮಿಸಿದರು.

ವಿರಾಟ್ ಕೊಹ್ಲಿ ಕೂಡಾ ತಮ್ಮ ಟೆಸ್ಟ್ ಕೆರಿಯರ್ ನಲ್ಲಿ ಕೊನೆ ಕೊನೆಗೆ ಇದೇ ರೀತಿ ಪದೇ ಪದೇ ತಪ್ಪು ಮಾಡಿ ಔಟಾಗುತ್ತಿದ್ದರು. ಹೀಗಾಗಿ ಅಭಿಮಾನಿಗಳು ರಾಹುಲ್ ರನ್ನು ಟ್ರೋಲ್ ಮಾಡಿದ್ದಾರೆ. ಕೊಹ್ಲಿ ಅನುಪಸ್ಥಿತಿ ಕಾಡಬಾರದು ಎಂದು ರಾಹುಲ್ ಕೂಡಾ ಕೊಹ್ಲಿಯಂತೆ ಔಟಾಗಿ ಅವರಿಗೆ ಇನಿಂಗ್ಸ್ ಸಮರ್ಪಿಸಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುಕ್ಕಾಣಿ ಹಿಡಿದ ಮೊದಲ ಪಂದ್ಯದಲ್ಲೇ ಶುಭಮನ್‌ ಗಿಲ್‌ ಸ್ಮರಣೀಯ ಶತಕ: ದಿಗ್ಗಜರ ಸಾಲಿಗೆ ಯುವ ನಾಯಕ