Publish Date: Mon, 23 Jun 2025 (09:18 IST)
Updated Date: Mon, 23 Jun 2025 (09:22 IST)
ಲೀಡ್ಸ್: ಟೀಂ ಇಂಡಿಯಾ ಬ್ಯಾಟಿಗ ಸಾಯಿ ಸುದರ್ಶನ್ ಜೊತೆ ಕೆಎಲ್ ರಾಹುಲ್ ಮೈದಾನದಲ್ಲಿ ತಮಿಳಿನಲ್ಲಿ ಮಾತನಾಡುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ರಾಹುಲ್ ಮತ್ತು ಸಾಯಿ ಸುದರ್ಶನ್ ನಿನ್ನೆ ಅರ್ಧಶತಕದ ಜೊತೆಯಾಟವಾಡಿದರು. ಯಶಸ್ವಿ ಜೈಸ್ವಾಲ್ ರನ್ನು ಬಹುಬೇಗನೇ ಕಳೆದುಕೊಂಡ ಟೀಂ ಇಂಡಿಯಾಕ್ಕೆ ಈ ಇಬ್ಬರೂ ಬ್ಯಾಟಿಗರು ಆಧಾರವಾದರು.
ಸಾಯಿ ಸುದರ್ಶನ್ ಮೂಲತಃ ತಮಿಳಿನವರು. ಇದೇ ಕಾರಣಕ್ಕೆ ಪಿಚ್ ಬಗ್ಗೆ ಕೆಎಲ್ ರಾಹುಲ್ ಬಳಿ ಸಾಯಿ ತಮಿಳಿನಲ್ಲೇ ಮಾತನಾಡಿದ್ದಾರೆ. ವಿಶೇಷವೆಂದರೆ ಇದಕ್ಕೆ ಕನ್ನಡಿಗ ಬ್ಯಾಟಿಗ ಕೆಎಲ್ ರಾಹುಲ್ ಕೂಡಾ ತಮಿಳಿನಲ್ಲೇ ಉತ್ತರಿಸಿದ್ದಾರೆ. ಎದುರಾಳಿ ತಂಡದ ಆಟಗಾರರಿಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಭಾರತೀಯ ಆಟಗಾರರು ಹಿಂದಿಯಲ್ಲಿ ಮಾತನಾಡುತ್ತಾರೆ.
ಆದರೆ ದಕ್ಷಿಣ ಭಾರತದ ಕ್ರಿಕೆಟಿಗರು ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿದ ಉದಾಹರಣೆಯೂ ಇದೆ. ಅದರಲ್ಲೂ ಕೆಎಲ್ ರಾಹುಲ್ ಕನ್ನಡಿಗ ಆಟಗಾರರ ಜೊತೆ ಕನ್ನಡದಲ್ಲೇ ಮಾತನಾಡಿದ್ದೂ ಇದೆ. ಇದೀಗ ಪಿಚ್ ಬಗ್ಗೆ ಸಾಯಿ ಸುದರ್ಶನ್ ಕೇಳಿದ ಪ್ರಶ್ನೆಗೆ ರಾಹುಲ್ ತಮಿಳಿನಲ್ಲೇ ಸ್ವಲ್ಪ ಬೌನ್ಸ್ ಇದೆ ಮಚ್ಚಿ ಎಂದು ತಮಿಳಿನಲ್ಲೇ ಉತ್ತರಿಸಿದ್ದಾರೆ.