Select Your Language

Notifications

webdunia
webdunia
webdunia
webdunia

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Gold
ಬೆಂಗಳೂರು: ಕಳೆದ ವಾರ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈ ವಾರದ ಆರಂಭದಲ್ಲೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಇತರೆ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಚಿನ್ನದ ಬೆಲೆ ಕಳೆದ ಒಂದು ವಾರದಿಂದ ಲಕ್ಷವನ್ನು ಮೀರಿ ನಿಂತಿದೆ. ಆದರೆ ವಾರಂತ್ಯಕ್ಕೆ ಕೊಂಚವೇ ಇಳಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿತ್ತು. ಆದರೆ ಇಂದು ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಮತ್ತೆ ಭಾರೀ ಏರಿಕೆಯಾಗಿದೆ. ವಾರಂತ್ಯದಲ್ಲಿ ಪರಿಶುದ್ಧ ಚಿನ್ನದ ದರ 1,01, 570.00 ರೂ.ಗಳಷ್ಟಿತ್ತು. ಇಂದು ಕೊಂಚ ಏರಿಕೆಯಾಗಿದ್ದು 1,02, 090.00 ರೂ.ಗಳಿಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 6 ರೂ. ಇಳಿಕೆಯಾಗಿದ್ದು 10,069 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 5 ರೂ. ಏರಿಕೆಯಾಗಿದ್ದು 9,230 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 4 ರೂ. ಇಳಿಕೆಯಾಗಿದ್ದು 7,552 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕಳೆದ ಕೆಲವು ದಿನಗಳಿಂದ ದಾಖಲೆಯ ಬೆಲೆ ಏರಿಕೆಯಾಗಿತ್ತು. ಆದರೆ ಇಂದು ಯಥಾಸ್ಥಿತಿಯಲ್ಲಿದೆ.  ಇಂದೂ ಬೆಳ್ಳಿ ದರ ಪ್ರತೀ ಕೆ.ಜಿ.ಗೆ  1,10, 000 ರೂ. ಗಳಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಗಮನಿಸಿ, ಇನ್ಮೇಲೆ ಹೊಸ ರೂಲ್ಸ್